ಕಾಟಿಪಳ್ಳ ಪ್ರಾ.ಶಾಲೆ, ಕೆನರಾ ಯೂತ್ ಕೌನ್ಸಿಲ್ ಜಂಟಿ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವ
ಕಾಟಿಪಳ್ಳ; ಜಿ.ಪ.ಹಿ.ಪ್ರಾ.ಶಾಲೆ ಹಾಗೂ ಕೆನರಾ ಯೂತ್ ಕೌನ್ಸಿಲ್ನ ಜಂಟಿ ಆಶ್ರಯದಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಕಾರ್ಪೊರೇಟರ್ ಲೋಕೇಶ್ ಬೊಳ್ಳಾಜೆ ನೆರವೇರಿಸಿದರು.
ಶಾಲಾ ಪ್ರಭಾರ ಮುಖ್ಯ ಶಿಕ್ಷಕ ದಿನೇಶ್ ಶೇಟ್ ಅಧ್ಯಕ್ಷತೆ ವಹಿಸಿದ್ದರು. ಕಾಟಿಪಳ್ಳ ಸಂಘ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಹುಸೈನ್ ಕಾಟಿಪಳ್ಳ, ರೂಫ್ ಟೆಕ್ ಇಂಡಸ್ಟ್ರಿಯಲ್ ಸರ್ವಿಸ್ನ ಮಾಲಕ ನಕ್ಕೀಸ್, ಸಿವೈಸಿ ಅಧ್ಯಕ್ಷ ನಾಸರ್, ಸಿವೈಸಿ ಮಾಜಿ ಅಧ್ಯಕ್ಷರಾದ ಹಬೀಬ್, ಅಖಿಲ್, ಇಮ್ತಿಯಾಝ್, ಅಶ್ರಫ್ ತಾಜ್ಫಿಶ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಶರೀಫ್ ಐಡಿಯಲ್, ರಿಲಯನ್ಸ್ ಯೂತ್ ಅಸೋಸಿಯೇಶನ್ ಅಧ್ಯಕ್ಷ ವಾಸಿಮ್, ಸಿವೈಸಿ ಗ್ಲೋಬಲ್ ಸದಸ್ಯರಾದ ಇರ್ಫಾನ್, ಸಾರಿಕ್, ಸಿವೈಸಿ ಸದಸ್ಯರಾದ ಜಂಶೀದ್, ಇಮ್ರಾನ್, ಸಿರಾಜ್, ರಿಲಯನ್ಸ್ ಅಶ್ಫಕ್, ಮೊಹಿಶಿನ್ ಮತ್ತಿತರರು ಪಾಲ್ಗೊಂಡಿದ್ದರು. ಸಂಚಾಲಕ ಸಲೀಂ ರಝಾಕ್ ಶ್ಯಾಡೊ ಸ್ವಾಗತಿಸಿದರು.
Next Story