ಸ್ವಾತಂತ್ರ್ಯ ಮಹೋತ್ಸವ ಪ್ರಯುಕ್ತ ಡ್ರಾಯಿಂಗ್ ಸ್ಪರ್ಧೆ: ಫಾತಿಮಾ ಫರೀಹಾ ಪ್ರಥಮ
ಬಂಟ್ವಾಳ, ಆ.16: ಸ್ವಾತಂತ್ರ್ಯ ಮಹೋತ್ಸವದ ಪ್ರಯುಕ್ತ ಸಲ್ ಸಬೀಲ್ ವಿದ್ಯಾರ್ಥಿ ಸಂಘಟನೆ ಹಮ್ಮಿಕೊಂಡ ಆನ್ಲೈನ್ ಚಿತ್ರ ಕಲಾ ಸ್ಪರ್ಧೆಯಲ್ಲಿ ಫಾತಿಮಾ ಫರೀಹಾ ಬೋಗೋಡಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ದ್ವಿತೀಯ ಸ್ಥಾನವನ್ನು ನಿದಾ ಫಾತಿಮಾ ಬೊಳ್ಳಾಯಿ ಹಾಗೂ ತೃತೀಯ ಸ್ಥಾನವನ್ನು ಫಾತಿಮಾ ನಿದಾ ನಗ್ರಿ ಪಡೆದಿದ್ದಾರೆ.
ಶಮ್ಮಾಝ್ ಗೂಡಿನಬಳಿ, ಫಾಯಿಝಾ ಕುಕ್ಕಾಜೆ, ರಾಫಿಯಾ ಬೊಳ್ಳಾಯಿ, ಅಸ್ಫಿಯಾ ಬಾನು ಬಂಗ್ಲಗುಡ್ಡೆ, ಮುಝಮ್ಮಿಲ್ ಬೋಗೋಡಿ, ಸಾದಿಕ್ ಮಿತ್ತಬೈಲ್ ಪ್ರೋತ್ಸಾಹಕ ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ ಎಂದು ಸಲ್ ಸಬೀಲ್ ಸಂಸ್ಥೆಯ ಅಧ್ಯಕ್ಷ ರಾಫಿದ್ ಬೋಗೋಡಿ ತಿಳಿಸಿದ್ದಾರೆ.
Next Story