ಪುಟ್ಬಾಲ್ ಪಂದ್ಯಾಟ: ಯೆನೆಪೊಯ ಕಾಲೇಜಿಗೆ ಪ್ರಶಸ್ತಿ
ಮಂಗಳೂರು : ಯೆನೆಪೊಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ) ಮತ್ತು ಯೆನೆಪೊಯ ಪಿಯು ಕಾಲೇಜಿನ ಸಹಯೋಗದಲ್ಲಿ ಮಂಗಳೂರು ತಾಲೂಕು ಮಟ್ಟದ ಅಂತರ್ ಕಾಲೇಜು ಮಟ್ಟದ ಪುಟ್ಬಾಲ್ ಪಂದ್ಯಾವಳಿಯು ದೇರಳಕಟ್ಟೆಯ ಯೆನೆಪೊಯ ಪುಟ್ಬಾಲ್ ಕ್ರೀಡಾಂಗಣದಲ್ಲಿ ನಡೆಯಿತು.
ಈ ಪಂದ್ಯಾವಳಿಯಲ್ಲಿ 14 ತಂಡಗಳು ಭಾಗವಹಿಸಿದ್ದವು. ಫೈನಲ್ ಪಂದ್ಯಾಟದಲ್ಲಿ ಯೆನೆಪೊಯ ಪಿಯು ಕಾಲೇಜು ತನ್ನ ಪ್ರತಿಸ್ಪರ್ಧಿ ಸೈಂಟ್ ಅಲೋಸಿಯಸ್ ತಂಡವನ್ನು 4-0 ಅಂತರದಲ್ಲಿ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತು.
ಪಂದ್ಯಾವಳಿಯ ಅತ್ಯುತ್ತಮ ಸ್ಟ್ರೈಕರ್ ಆಗಿ ಯೆನೆಪೊಯ ಪಿಯು ಕಾಲೇಜಿನ ಟಿ.ಡಿ. ತೌಬಾ, ಅತ್ಯುತ್ತಮ ಡಿಫೆಂಡರ್ ಯೆನೆಪೊಯ ಪಿಯು ಕಾಲೇಜಿನ ಶೆಬಿನ್, ಅತ್ಯುತ್ತಮ ಗೋಲ್ ಕೀಪರ್ ಆಗಿ ಅಲೋಸಿಯಸ್ ಕಾಲೇಜಿನ ವರುಣ್ ಗೌಡ ಪ್ರಶಸ್ತಿ ಪಡೆದರು.
Next Story