ಗಾಂಜಾ ಸೇವನೆ ಆರೋಪ : ಮೂವರು ವಶಕ್ಕೆ
ಮಣಿಪಾಲ, ಸೆ.೨: ಗಾಂಜಾ ಸೇವನೆಗೆ ಸಂಬಂಧಿಸಿದಂತೆ ಸೆ.26ರಂದು ಮಣಿಪಾಲದ ಎಂಡ್ ಪಾಯಿಂಟ್ ಬಳಿ ದಿಲ್ಬರ್ ಶಾಕಿರ್ ಎಂ.(22) ಹಾಗೂ ನಿತಿನ್ ಪಿ.(21) ಮತ್ತು ಮಣಿಪಾಲದ ಶೀಂಬ್ರಾ ಸೇತುವೆ ಬಳಿ ಶಬಿಬ್(21) ಎಂಬವರನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು, ಪರೀಕ್ಷೆ ಯಲ್ಲಿ ಇವರು ಗಾಂಜಾ ಸೇವಿಸಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story