‘ಬಾಯೋ ಆಮ್ಚೆ ಚೇಡು’ ಚಲನಚಿತ್ರದ ಟ್ರೈಲರ್ ಆಡಿಯೋ ಬಿಡುಗಡೆ
ಮಂಗಳೂರು : ಆರ್ಎಸ್ ಬಿ. ಕೊಂಕಣಿ ಭಾಷೆಯ ಅದ್ದೂರಿ ಚಲನಚಿತ್ರ ಕಾಮತ್ ಕ್ರಿಯೇಷನ್ಸ್ರವರ ‘ಬಾಯೋ ಆಮ್ಚೆ ಚೇಡು ಇದರ ಆಡಿಯೋ ಹಾಗೂ ಟ್ರೈಲರ್ ಬಿಡುಗಡೆ ಕಾರ್ಯಕ್ರಮವು ಮಣಿಪಾಲದ ಭಾರತ್ ಸಿನಿಮಾಸ್ನಲ್ಲಿ ನಡೆಯಿತು.
ಉಡುಪಿ ಶಾಸಕ ಕೆ. ರಘುಪತಿ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಪುನೀತ್ ರಾಜ್ ಕುಮಾರ್ ಅವರ ಹೆಸರಿನಲ್ಲಿ ಟ್ರೈಲರ್ ಬಿಡುಗಡೆಗೊಳಿಸಲಾಯಿತು. ಕನ್ನಡ, ತುಳು ಚಿತ್ರನಟ ಪೃಥ್ವಿ ಅಂಬಾರ್ ಆಡಿಯೋ ಬಿಡುಗಡೆಗೊಳಿಸಿ ಶುಭ ಕೋರಿದರು.
ಈ ಸಂದರ್ಭ ಕೊಂಕಣಿ ಅಕಾಡಮಿಯ ಡಾ. ಜಗದೀಶ್ ಪೈ, ಗೋಕುಲದಾಸ್ ನಾಯಕ್, ಅಶೋಕ್ ನಾಯಕ್ ಹಿರ್ಗಾನ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಶ್ರೀಕಾಂತ್ ನಾಯಕ್, ನವೀನ್ ನಾಯಕ್, ರವೀಂದ್ರ ಪ್ರಭು, ಕಡಾರಿ, ಮೋಹಿನಿ ಎನ್. ನಾಯಕ್, ಉಷಾ ನಾಯಕ್ ಉಪಸ್ಥಿತರಿದ್ದರು.
Next Story