ಮಂಗಳೂರು: ಐ-ಸ್ಟೋರ್ ಐ-ಪೋನ್ ಮಳಿಗೆ ಶುಭಾರಂಭ
ಮಂಗಳೂರು, ನ.28: ನಗರದ ಕೆ.ಎಸ್.ರಾವ್ ರಸ್ತೆಯ ಸಿಟಿ ಸೆಂಟರ್ ಮಾಲ್ ಬಳಿ ಐ ಸ್ಟೋರ್ ಐ-ಪೋನ್ ಮಳಿಗೆ ಸೋಮವಾರ ಶುಭಾರಂಭಗೊಂಡಿತು.
ನೂತನ ಮಳಿಗೆಯನ್ನು ಗ್ರೂಪ್ 4 ಸಂಸ್ಥೆಯ ಪ್ರೊಪ್ರೈಟರ್ ಇಬ್ರಾಹೀಂ ಉದ್ಟಾಟಿಸಿದರು.
ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಮ್ಯಾಂಗಲೂರ್ ಮಾರ್ಕೆಟಿಂಗ್ ನ ಮಾಲಕ ಬಿ.ಬಶೀರ್ ಭಾಗವಹಿಸಿದ್ದರು.
ಐ-ಸ್ಟೋರ್ ಸಂಸ್ಥೆಯ ಪಾಲುದಾರರಾದ ಇರ್ಷಾದ್ ಮತ್ತು ಬಾಸ್ಸಮ್ ಎ.ಕೆ. ಉಪಸ್ಥಿತರಿದ್ದರು.
ಐ-ಸ್ಟೋರ್ ಹೊಸ ಐ ಪೋನ್ ಗಳ ವೈವಿಧ್ಯಮಯ ಸಂಗ್ರಹವನ್ನು ಹೊಂದಿದೆ. ಮುಖ್ಯವಾಗಿ ಹೊಸ ಆ್ಯಪಲ್ ಫೋನ್, ಆ್ಯಪಲ್ ಫೋನ್ (ನ್ಯೂ ಮತ್ತು ಯೂಸ್ಡ್ ಐ ಪೋನ್ ) ಸರ್ವೀಸ್ ಗ್ರಾಹಕರಿಗೆ ಈ ಮಳಿಗೆಯಲ್ಲಿ ದೊರೆಯಲಿದೆ ಎಂದು ಸಂಸ್ಥೆಯ ಪ್ರತಿನಿಧಿಗಳು ತಿಳಿಸಿದ್ದಾರೆ.