ಬೆಳ್ತಂಗಡಿ: ಮಹಿಳೆ ಆತ್ಮಹತ್ಯೆ
ಬೆಳ್ತಂಗಡಿ, ನ.28: ಪುದುವೆಟ್ಟು ಗ್ರಾಮದ ಮೇರ್ಲ ಎಂಬಲ್ಲಿ ಮಹಿಳೆಯೊಬ್ಬರು ಆ್ಯಸಿಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ.
ಮೃತರನ್ನು ಸ್ಥಳೀಯ ನಿವಾಸಿ ರವಿ ಎಂಬವರ ಪತ್ನಿ ಬಿಂದೂ(48) ಗುರುತಿಸಲಾಗಿದೆ. ಇವರು ನ.27ರಂದು ಮನೆಯಲ್ಲಿ ರಬ್ಬರಿಗೆ ಉಪಯೋಗಿಸುವ ಆ್ಯಸಿಡ್ ಸೇವಿಸಿದ್ದಾರೆನ್ನಲಾಗಿದೆ. ಮನೆಯವರು ಕೂಡಲೇ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಲಾಗಿದೆ.
Next Story