ಪುತ್ತೂರು ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ: ಅಧ್ಯಕ್ಷರಾಗಿ ಸಿದ್ದಿಕ್ ನೀರಾಜೆ, ಪ್ರ.ಕಾರ್ಯದರ್ಶಿಯಾಗಿ ಶಶಿಧರ ರೈ
ಪುತ್ತೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ಶಾಖೆಯ ಆಡಳಿತ ಮಂಡಳಿಯ ಚುನಾವಣೆಯು ಸೋಮವಾರ ಪುತ್ತೂರಿನ ಪತ್ರಿಕಾ ಭವನದಲ್ಲಿ ನಡೆಯಿತು. ಸಂಘದಲ್ಲಿ 23 ಮಂದಿ ಸದಸ್ಯರು ಮತದಾರರಾಗಿದ್ದು, ಚುನಾವಣೆಯಲ್ಲಿ ಶೇ. 100 ಮತದಾನ ದಾಖಲಾಗಿತ್ತು.
ಅಧ್ಯಕ್ಷರಾಗಿ ಎ.ಸಿದ್ದಿಕ್ ನೀರಾಜೆ, ಉಪಾಧ್ಯಕ್ಷರಾಗಿ ಎಂ.ಎಸ್.ಭಟ್ ಮತ್ತು ಕಿರಣ್ ಪ್ರಸಾದ್ ಕೆ, ಕಾರ್ಯದರ್ಶಿಗಳಾಗಿ ಅಜಿತ್ ಕುಮಾರ್ ಕೆ ಹಾಗು ಕೆ.ಮೊಹಮ್ಮದ್ ನಝೀರ್ ಅವಿರೋಧವಾಗಿ ಆಯ್ಕೆಯಾಗಿದ್ದರು.
ಪ್ರಧಾನ ಕಾರ್ಯದರ್ಶಿಯಾಗಿ ಶಶಿಧರ ರೈ ಹಾಗೂ ಕೋಶಾಧಿಕಾರಿಯಾಗಿ ಸಂಶುದ್ದೀನ್ ಸಂಪ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸುಧಾಕರ ಕೆ., ಉಮಾಶಂಕರ, ಮೇಘ ಪಾಲೆತ್ತಾಡಿ, ಐ.ಬಿ.ಸಂದೀಪ್ ಕುಮಾರ್, ಶೇಷಪ್ಪ ಕಜೆಮಾರ್, ಕುಮಾರ್ ಕಲ್ಲಾರೆ, ಕೃಷ್ಣ ಪ್ರಸಾದ್, ಕರುಣಾಕರ ರೈ ಸಿ.ಎಚ್ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಇಬ್ರಾಹಿಂ ಅಡ್ಕಸ್ಥಳ ಚುನಾವಣಾಧಿಕಾರಿ ಹಾಗೂ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ ಉಪ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು.
ಚುನಾವಣಾ ಮೇಲುಸ್ತುವಾರಿಯಾಗಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎನ್.ರವಿಕುಮಾರ್ ಆಗಮಿಸಿದ್ದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್, ಕಾರ್ಯಕಾರಿ ಸಮಿತಿ ಸದಸ್ಯ ರಾಜೇಶ್ ದಡ್ಡಂಗಡಿ ಚುನಾವಣಾ ಕರ್ತವ್ಯದಲ್ಲಿ ಭಾಗವಹಿಸಿದ್ದರು.