ಅಬುಧಾಬಿಯಲ್ಲಿ 19.5 ಕೋಟಿ ರೂ. ಗೆದ್ದ ಭಾರತೀಯ
ಅಬುಧಾಬಿ, ಫೆ. 3: ‘ಬಿಗ್ ಟಿಕೆಟ್ ಅಬುಧಾಬಿ’ ಲಾಟರಿಯಲ್ಲಿ ರವಿವಾರ ಭಾರತೀಯರೊಬ್ಬರು 10 ಮಿಲಿಯ ದಿರ್ಹಮ್ (ಸುಮಾರು 19.5 ಕೋಟಿ ರೂಪಾಯಿ) ಗೆದ್ದಿದ್ದಾರೆ.ಪ್ರಶಾಂತ್ ಪಂಡರತಿಲ್ ಬಂಪರ್ ಬಹುಮಾನ ಗೆದ್ದವರು.
ಎರಡನೇ ಬಹುಮಾನ ಒಂದು ಲಕ್ಷ ದಿರ್ಹಮ್ (ಸುಮಾರು 19.5 ಲಕ್ಷ ರೂಪಾಯಿ) ಕೂಡ ಭಾರತೀಯನಿಗೆ ಹೋಗಿದೆ.
ಎಂದಿನಂತೆಯೇ, ಅಗ್ರ 10 ಬಹುಮಾನ ವಿಜೇತರಲ್ಲಿ ಭಾರತೀಯರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಈ ಪೈಕಿ 6 ಮಂದಿ ಭಾರತೀಯರು, ಇಬ್ಬರು ಪಾಕಿಸ್ತಾನೀಯರು ಹಾಗೂ ಫಿಲಿಪ್ಪೀನ್ಸ್ ಮತ್ತು ದಕ್ಷಿಣ ಕೊರಿಯದ ತಲ ಒಬ್ಬರು.
Next Story