ಕುವೈತ್: ನೂತನ ಅಮೀರ್ ಆಗಿ ಯುವರಾಜ ಶೇಖ್ ನವಾಫ್ ನೇಮಕ
ಕುವೈತ್ ಸಿಟಿ, ಸೆ. 30: ಕುವೈತ್ನ ನೂತನ ಅಮೀರ್ (ದೊರೆ) ಆಗಿ ಯುವರಾಜ ಶೇಖ್ ನವಾಫ್ ಅಲ್-ಅಹ್ಮದ್ ಅಲ್-ಸಬಾಹ್ರನ್ನು ಮಂಗಳವಾರ ನೇಮಿಸಲಾಗಿದೆ. ಕುವೈತ್ ಅಮೀರ್ ಶೇಖ್ ಸಬಾಹ್ ಅಲ್-ಅಹ್ಮದ್ ಅಲ್-ಸಬಾಹ್ ತನ್ನ 91ನೇ ವಯಸ್ಸಿನಲ್ಲಿ ನಿಧನರಾದ ಬಳಿಕ ಈ ನೇಮಕ ಮಾಡಲಾಗಿದೆ.
ನೂತನ ಅಮೀರ್ ಈ ಮೊದಲ ಅಮೀರ್ರ ಮಲಸಹೋದರನಾಗಿದ್ದಾರೆ.
‘‘ಸಂವಿಧಾನದ ವಿಧಿಗಳಂತೆ, ಯುವರಾಜ ಶೇಖ್ ನವಾಫ್ ಅಲ್-ಅಹ್ಮದ್ ಅಲ್-ಜಾಬಿರ್ ಅಲ್-ಸಬಾಹ್ರನ್ನು ಕುವೈತ್ನ ಅಮೀರ್ ಆಗಿ ಸಚಿವ ಸಂಪುಟವು ನೇಮಿಸಿದೆ’’ ಎಂದು ಉಪ ಪ್ರಧಾನಿ ಅನಸ್ ಖಾಲಿದ್ ಅಲ್-ಸಾಲಿಹ್ ಟೆಲಿವಿಶನ್ನಲ್ಲಿ ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಹೇಳಿದರು.
ಕುವೈತ್ ಅಮೀರ್ ಶೇಖ್ ಸಬಾಹ್ ಅಲ್-ಅಹ್ಮದ್ ಅಮೆರಿಕದ ಆಸ್ಪತ್ರೆಯೊಂದರಲ್ಲಿ ಮಂಗಳವಾರ ನಿಧನರಾಗಿದ್ದಾರೆ.
Next Story