ಯುಎಇ ವೀಸಾ ಸುಧಾರಣೆಗಳು: ಉದ್ಯೋಗ ಕಳೆದುಕೊಂಡ ನಂತರವೂ ವಲಸಿಗರು 180 ದಿನಗಳ ತನಕ ಉಳಿದುಕೊಳ್ಳಬಹುದು | Vartha Bharati- ವಾರ್ತಾ ಭಾರತಿ

--

ಯುಎಇ ವೀಸಾ ಸುಧಾರಣೆಗಳು: ಉದ್ಯೋಗ ಕಳೆದುಕೊಂಡ ನಂತರವೂ ವಲಸಿಗರು 180 ದಿನಗಳ ತನಕ ಉಳಿದುಕೊಳ್ಳಬಹುದು

ದುಬೈ: ಸಂಯುಕ್ತ ಅರಬ್ ಸಂಸ್ಥಾನದಲ್ಲಿ ತಮ್ಮ ಉದ್ಯೋಗವನ್ನು ಕಳೆದುಕೊಂಡಿರುವ ವಲಸಿಗರು ಅಲ್ಲಿ  ಉದ್ಯೋಗ ಕಳೆದುಕೊಂಡ ನಂತರದ ಆರು ತಿಂಗಳ ಅವಧಿ ತನಕ ಉಳಿದುಕೊಳ್ಳಬಹುದು ಎಂದು ಅಲ್ಲಿನ ಆಡಳಿತ ರವಿವಾರ ಘೋಚಿಸಿದ ಹೊಸ ಸುಧಾರಣಾ ನೀತಿಗಳು ತಿಳಿಸಿವೆ.

ಸಂಯುಕ್ತ ಅರಬ್ ಸಂಸ್ಥಾನದ ಈಗ ಇರುವ ನಿಯಮಗಳ ಪ್ರಕಾರ ಉದ್ಯೋಗ ಕಳೆದುಕೊಂಡ ವಲಸಿಗರು  30 ದಿನಗಳೊಳಗೆ ದೇಶ ತೊರೆಯಬೇಕಿದೆ. ಆದರೆ ಈ ನಿಯಮದಲ್ಲಿ ಈಗ ಸಡಿಲಿಕೆ ತಂದು ಉದ್ಯೋಗ ಕಳೆದುಕೊಂಡ ನಂತರ ಮೂರರಿಂದ ಆರು ತಿಂಗಳು ಅಲ್ಲಿ ವಾಸಿಸಲು ಅವಕಾಶ ಕಲ್ಪಿಸಲಾಗುವುದು.

ನಿಯಮ ಸಡಿಲಿಕೆಯಿಂದಾಗಿ ಈಗ ಅಲ್ಲಿ ಉದ್ಯೋಗ ಕಳೆದುಕೊಂಡ ವಲಸಿಗರಿಗೆ ಬೇರೆ ಉದ್ಯೋಗ ಹುಡುಕಲು ಸಮಯಾವಕಾಶ ದೊರಕಿದಂತಾಗುತ್ತದೆಯಲ್ಲದೆ ಅರ್ಹರನ್ನು ದೇಶದಲ್ಲಿಯೇ ಉಳಿಸಿಕೊಳ್ಳುವ ಅವಕಾಶವೂ ಸಂಯುಕ್ತ ಅರಬ್ ಸಂಸ್ಥಾನಕ್ಕೆ ದೊರೆಯಲಿದೆ.

"ಈ ಹಿಂದಿನ 30 ದಿನಗಳ ಬದಲು ಈಗ ಉದ್ಯೋಗ ಕಳೆದುಕೊಂಡವರಿಗೆ ದೇಶ ತೊರೆಯಲು 90ರಿಂದ 180 ದಿನಗಳ ಕಾಲಾವಕಾಶವಿದೆ" ಎಂದು ವಿದೇಶ ವ್ಯವಹಾರ ಸಚಿವ ಡಾ ಥನಿ ಬಿನ್ ಅಹ್ಮದ್ ಅಲ್ ಝೆಯೋದಿ ಹೇಳಿದ್ದಾರೆ.

ಸಂಯುಕ್ತ ಅರಬ್ ಸಂಸ್ಥಾನದ ಆಡಳಿತದ `ಪ್ರಾಜೆಕ್ಟ್ಸ್ ಆಫ್ ದಿ 50' ಮುಖ್ಯ ಉದ್ದೇಶ ದೇಶವನ್ನು ಉದ್ಯೋಗ, ಹೂಡಿಕೆ, ಉದ್ಯಮಶೀಲತೆ, ಶಿಕ್ಷಣ ಮತ್ತು ಜೀವನಕ್ಕಾಗಿ ಅತ್ಯುತ್ತಮ ತಾಣವೆಂದು ಬಿಂಬಿಸುವುದಾಗಿದೆ.

ಮೇಲೆ ತಿಳಿಸಿದ ಸುಧಾರಣೆ ಹೊರತಾಗಿ ಅಲ್ಲಿನ ಆಡಳಿತ ಜಾರಿಗೆ ತರಲಿರುವ ಇನ್ನೂ ಕೆಲ ಸುಧಾರಣೆಗಳು ಇಂತಿವೆ.

* ಬಿಸಿನೆಸ್ ಪ್ರವಾಸ ಪರ್ಮಿಟ್‍ಗಳನ್ನು 3 ತಿಂಗಳುಗಳಿಂದ 6 ತಿಂಗಳುಗಳಿಗೆ ವಿಸ್ತರಿಸುವುದು.

* ನೇರ ಕುಟುಂಬ ಸದಸ್ಯರ ವೀಸಾ ಅಡಿ ಹೆತ್ತವರಿಗೂ ಅವಕಾಶ

* ಮಾನವೀಯತೆಯ ಆಧಾರದಲ್ಲಿ ಒಂದು ವರ್ಷ ಉಳಿದುಕೊಳ್ಳುವಿಕೆ ಅವಧಿ ವಿಸ್ತರಣೆ

* ಹೆತ್ತವರ ರೆಸಿಡೆನ್ಸಿ ಪರ್ಮಿಟ್ ಆಧಾರದಲ್ಲಿ  ಮಕ್ಕಳಿಗೆ ಅನುಮತಿ ವಿಸ್ತರಣೆಯನ್ನು 18ರಿಂದ 25 ವರ್ಷಗಳಿಗೆ ಏರಿಸಲಾಗಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top