ಬಹ್ರೈನಿಗಳು ಸಿಗದಿದ್ದರೆ ಮಾತ್ರ ವಿದೇಶಿಯರಿಗೆ ಕೆಲಸ
ಮನಾಮ, ಮಾ. 27: ವಿವಿಧ ಹುದ್ದೆಗಳು ಖಾಲಿ ಇದ್ದಾಗ ಅದಕ್ಕೆ ಮೊದಲು ಸ್ವದೇಶಿಯರನ್ನು ಪರಿಗಣಿಸಲಾಗುವುದು ಎಂದು ಬಹ್ರೈನ್ ಸಿವಿಲ್ ಸರ್ವಿಸ್ ಬ್ಯೂರೊ ಹೇಳಿದೆ. ಒಂದುವೇಳೆ ಸ್ವದೇಶಿಗಳು ಸಿಗದಿದ್ದರೆ ಅಂತಹ ಕೆಲಸಗಳಿಗೆ ವಿದೇಶಿಗಳನ್ನುಪರಿಗಣಿಸಲಾಗುವುದು ಎಂದು ಸಿವಿಲ್ ಸರ್ವೀಸ್ ಬ್ಯೂರೊ ತಿಳಿಸಿದೆ. ಸ್ವದೇಶಿಯರಿಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ವಿದೇಶಿಗಳಿಗೆ ನೀಡುವುದನ್ನು ತಾನು ಅಂಗೀಕರಿಸುವುದಿಲ್ಲ ಎಂದು ಬ್ಯೂರೊ ಸ್ಪಷ್ಟಪಡಿಸಿದೆ.
ಉದ್ಯೋಗಾವಕಾಶಗಳಿಗೆ ಸಂಬಂಧಿಸಿದ ಪ್ರಕಟನೆಗಳನ್ನು ನೀಡುವುದರಲ್ಲಿಯೂ ನಿಯಂತ್ರಣಗಳನ್ನು ಪಾಲಿಸಲಾಗುವುದು. ಸ್ವದೇಶಿಗಳು ಸಿಗದಿದ್ದರೆ ಖಾಲಿ ಹುದ್ದೆಗಳನ್ನು ಭರ್ತಿಮಾಡಲು ವಿದೇಶಿ ಮಾಧ್ಯಮಗಳಲ್ಲಿ ಜಾಹಿರಾತು ನೀಡಲು ತೀರ್ಮಾನಿಸಲಾಗಿದೆ.ಸರಕಾರಿ ಕೆಲಸಗಳಿಂದ ವಿದೇಶಿಯರನ್ನು ಹೊರತು ಪಡಿಸಲು ಇದು ಹೆಚ್ಚು ಸಹಕಾರಿಯಾಗಲಿದೆ ಎಂದು ಬ್ಯೂರೊದ ಮೂಲಗಳು ತಿಳಿಸಿವೆ.
Next Story