ಕಾಟಿಪಳ್ಳ 4ನೆ ಬ್ಲಾಕಿನ ಮದರಸದಲ್ಲಿ ಸಂಭ್ರಮದ ಮೀಲಾದುನ್ನಬಿ
ಕಾಟಿಪಳ್ಳ, ಡಿ.3: ಅಲ್ ಮದರಸತುಲ್ ಬದ್ರಿಯಾ ಕಾಟಿಪಳ್ಳ ನಾಲ್ಕನೇ ಬ್ಲಾಕಿನ ವಿದ್ಯಾರ್ಥಿಗಳಿಂದ ಪ್ರವಾದಿ ಮುಹಮ್ಮದ್ (ಸ.ಅ) ಅವರ ಜನ್ಮ ದಿನ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕೇಂದ್ರ ಮಸೀದಿಯವರೆಗೆ ಮೆರವಣಿಗೆ ನಡೆಯಿತು. ಖತೀಬ್ ಫಾರೂಕ್ ಅಹ್ಸನಿ, ಸದರ್ ಮುಹಮ್ಮದ್ ಸಖಾಫಿ ಮತ್ತು ಉಸ್ತಾದುಗಳಾದ ಪಿ.ಎಚ್. ಸಲೀಂ ಮದನಿ, ಅಬ್ದುಲ್ ರಹೀಮ್ ಅಮಾನಿ, ಮಸೀದಿಯ ಅಧ್ಯಕ್ಷರು, ಪದಾಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.
Next Story