ಉಚ್ಚಿಲ: ಮರ ಬಿದ್ದು ಮೀನು ಮಾರುಕಟ್ಟೆಗೆ ಹಾನಿ
ಪಡುಬಿದ್ರೆ, ಮೇ 22: ಇಂದು ಮುಂಜಾನೆ ಬೀಸಿದ ಭಾರೀ ಗಾಳಿಗೆ ಬೃಹತ್ ಮರವೊಂದು ಉರುಳಿ ಬಿದ್ದು, ಮೀನು ಮಾರುಕಟ್ಟೆ ಸಂಪೂರ್ಣ ಹಾನಿಗೊಂಡ ಘಟನೆ ಉಚ್ಚಿಲದಲ್ಲಿ ನಡೆದಿದೆ.
ಬಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಚ್ಚಿಲ ಪರಿಸರದಲ್ಲಿ ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಭಾರೀ ಗಾಳಿಯೊಂದಿಗೆ ಮಳೆ ಸುರಿದಿದೆ. ಈ ವೇಳೆ ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರ ಪೇಟೆ ಬಳಿಯ ರಾಧಾ ಹೊಟೇಲ್ ಬಳಿ ಬೃಹತ್ ಮರವೊಂದು ಉರುಳಿ ಮೀನು ಮಾರುಕಟ್ಟೆಯ ಮೇ ಬಿದ್ದಿದೆ. ಇದರಿಂದ ಮಾರುಕಟ್ಟೆ ಸಂಪೂರ್ಣ ಹಾನಿಗೀಡಾಗಿದೆ. ಮರ ಬೀಳುವ ಹೈಟೆನ್ಶನ್ ತಂತಿಗೆ ತಾಗಿದ್ದರಿಂದ ತಂತಿ ತುಂಡಾಗಿದ್ದು, ಪರಿಸರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ
Next Story