ಕೆ.ಎಸ್ ಹಾಜಿ & ಫ್ಯಾಮಿಲಿ: ಅಧ್ಯಕ್ಷರಾಗಿ ಹಮೀದ್ ಕುವೈಟ್, ಪ್ರ.ಕಾರ್ಯದರ್ಶಿಯಾಗಿ ಮಹ್ರೂಫ್ ಆಯ್ಕೆ
ಉಪ್ಪಿನಂಗಡಿ, ಜೂ.15: ಕುದ್ಲೂರು ಮರ್ಹೂಂ ಸುಲೈಮಾನ್ ಹಾಜಿ ಅವರ ಕುಟುಂಬ ಸದಸ್ಯರು ವರ್ಷಗಳ ಹಿಂದೆ ಸಮಿತಿಯೊಂದನ್ನು ರೂಪಿಸಿದ್ದು, ಅದರ ವಾರ್ಷಿಕ ಮಹಾಸಭೆಯು ನಿಕಟಪೂರ್ವ ಅಧ್ಯಕ್ಷ ಸುಲೈಮಾನ್ ಮುಸ್ಲಿಯಾರ್ ನೇತೃತ್ವದಲ್ಲಿ ನಡೆಯಿತು. ಪ್ರಧಾನ ಕಾರ್ಯದರ್ಶಿ ಎಂ.ಎಚ್ ಮುಹಮ್ಮದ್ ಮದನಿ ವರದಿ ಮತ್ತು ಲೆಕ್ಕಪತ್ರ ವಾಚಿಸಿ ಹಳೆಯ ಸಮಿತಿಯನ್ನು ವಿಸರ್ಜಿಸಿ ನೂತನ ಸಮಿತಿ ರಚಿಸಲಾಯಿತು.
ಅಧ್ಯಕ್ಷರಾಗಿ ಹಮೀದ್ ಕುವೈಟ್, ಉಪಾಧ್ಯಕ್ಷರಾಗಿ ಮಜೀದ್ ಸಖಾಫಿ, ಮುವಾದ್ ಕುದ್ಲೂರು, ಇಮ್ರಾಝ್ ಕಳಂಜಿಬೈಲ್ ನೇಮಕಗೊಂಡರು. ಪ್ರಧಾನ ಕಾರ್ಯದರ್ಶಿಯಾಗಿ ಎಂ.ಎಂ ಮಹ್ ರೂಫ್, ಜೊತೆ ಕಾರ್ಯದರ್ಶಿಗಳಾಗಿ ಹಾಮಿದ್ ಸಅದಿ, ಮುಜಿತಬಾ ಬಂಡಾಡ್, ಸಹಲ್ ಕುದ್ಲೂರು, ಸಂಘಟನಾ ಕಾರ್ಯದರ್ಶಿಯಾಗಿ ಸಿನಾನ್ ಉಜಿರೆ, ಕೋಶಾಧಿಕಾರಿಯಾಗಿ ಸುಲೈಮಾನ್ ಮುಸ್ಲಿಯಾರ್, ಲೆಕ್ಕ ಪರಿಶೋಧಕರಾಗಿ ಎಂ.ಎಚ್ ಮುಹಮ್ಮದ್ ಮದನಿ, ಸಿರಾಜ್ ಕುದ್ಲೂರು ಹಾಗೂ 6 ಮಂದಿಯನ್ನು ಕಾರ್ಯಕಾರಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು.
Next Story