ದೇವಸ್ಥಾನದಲ್ಲಿ ಕಳವು
ಕೋಟ, ಜು.15: ಅಚ್ಲಾಡಿ ಗ್ರಾಮದ ಬೊಬ್ಬರ್ಯ ಮತ್ತು ಚಿಕ್ಕಮ್ಮ ದೇವಸ್ಥಾನಕ್ಕೆ ಜು.8ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಕಾಣಿಕೆ ಡಬ್ಬ ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಕಳ್ಳರು ದೇವಸ್ಥಾನದ ಒಳಗಿದ್ದ ಕಾಣಿಕೆ ಡಬ್ಬವನ್ನು ಒಡೆದು ಅದರಲ್ಲಿದ್ದ 5,500 ರೂ. ಹಣವನ್ನು ಕಳವು ಮಾಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story