ಪಂಪ್ವೆಲ್: ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ
ಮಂಗಳೂರು, ಜು.23: ಪಂಪ್ವೆಲ್ ಬಳಿಯ ದೀಪಕ್ ಎಲೆಕ್ಟ್ರಾನಿಕ್ ಅಂಗಡಿ ಜಗಲಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಮಲಗಿದಲ್ಲಿಯೇ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಅಂದಾಜು 35ರಿಂದ 40 ವರ್ಷ ವಯಸ್ಸಾಗಿದ್ದು, ಬಿಳಿ ಮೈಬಣ್ಣ, 5.5 ಅಡಿ ಎತ್ತರ, ಬೂದು ಬಣ್ಣದ ರೌಂಡ್ ಕಾಲರಿನ ತುಂಬು ತೋಳಿನ ಟಿ ಶರ್ಟ್ ಹಾಗೂ ಕಪ್ಪು ಬಣ್ಣದ ಟ್ರಾಕ್ ಪ್ಯಾಂಟ್ ಧರಿಸಿದ್ದರು. ಎಡ ಕೈ ಮುಂಗೈಯಲ್ಲಿ ನಾಗನ ಚಿತ್ರವಿರುವ ಹಚ್ಚೆ ಇದೆ. ಅಲ್ಲದೆ ಎದೆಯ ಎಡ ಭಾಗದಲ್ಲಿ ಪುಟ್ಟಿ ಎಂದು ಬರೆದಿರುವ ಹಚ್ಚೆ ಇದೆ.
ಮೃತಹೇಹವನ್ನು ವೆನ್ಲಾಕ್ ಶವಗಾರದಲ್ಲಿ ಇರಿಸಲಾಗಿದೆ. ಈ ಚಹರೆಯನ್ನು ಹೋಲುವ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಿದರೆ ಕಂಕನಾಡಿ ನಗರ ಠಾಣೆಗೆ (9480805354, 0824-2220529) ಅಥವಾ ಕಂಟ್ರೋಲ್ ರೂಮ್ (0824-222800)ಗೆ ಕರೆ ಮಾಡಿ ತಿಳಿಸಲು ಪೊಲೀಸ್ ಇಲಾಖೆ ಕೋರಿದೆ.
Next Story