ಮಂಗಳೂರು: ಮುಹಮ್ಮದ್ ಆಸೀಫ್ಗೆ ಪಿಎಚ್ಡಿ ಪದವಿ
ಮಂಗಳೂರು, ಜು. 24: ಭೂೃಣ ಶಾಸ್ತ್ರಜ್ಞ ಮುಹಮ್ಮದ್ ಆಸೀಫ್ ಮಂಡಿಸಿದ ಮಹಾ ಪ್ರಬಂಧಕ್ಕೆ ಯೆನೆಪೋಯ ವಿಶ್ವವಿದ್ಯಾನಿಲಯ ಪಿಎಚ್ಡಿ ಪದವಿ ನೀಡಿದೆ.
ಆಸೀಫ್ ಅವರು ‘ದಿ ಸ್ಟಡಿ ಆನ್ ಡರ್ಮಟೊಗ್ಲಿಪಿಕ್ ಟ್ರೈಟ್, ಎಬಿಒ/ಆರ್ಎಚ್ ಬ್ಲಡ್ ಗ್ರೂಪ್ಸ್ ಮತ್ತು ಕಾಮನ್ ಜೆನೆಟಿಕ್ ವೆರಿಯೆಂಟ್ಸ್ ಅಸೋಸಿಯೇಟೆಡ್ ವಿದ್ ಮಯೋಕಾರ್ಡಿಯಲ್ ಇನ್ಫೆಕ್ಷನ್’ ಮಹಾಪ್ರಬಂಧ ಮಂಡಿಸಿದ್ದರು.
ಆಸೀಫ್ ಅವರು ಅಂಗ ರಚನಾ ಶಾಸ್ತ್ರಜ್ಞ ಡಾ. ಶಿವರಾಮ ಭಟ್, ತಳಿ ಶಾಸ್ತ್ರಜ್ಞ ಡಾ. ಮುಸ್ತಾಕ್ ಹಾಗೂ ಹೃದ್ರೋಗ ತಜ್ಞ ಡಾ. ಸುಬ್ರಮಣ್ಯಂ ಮಾರ್ಗದರ್ಶನದಲ್ಲಿ ಈ ಪ್ರಬಂಧ ಮಂಡಿಸಿದ್ದರು.
ಮುಹಮ್ಮದ್ ಆಸೀಫ್ ಫರಂಗಿಪೇಟೆ ಉಮರಬ್ಬ(ಪುತುಭಾವ) ಮತ್ತು ಅಲಿಮಮ್ಮ ದಂಪತಿಯ ಪುತ್ರ.
Next Story