ಮಂಗಳೂರು: ‘ರೋಯಲ್ ಗಝೆಬೊ’ ರೆಸ್ಟೋರೆಂಟ್ ಉದ್ಘಾಟನೆ
ಮಂಗಳೂರು, ನ.3: ನಗರದ ಕೆ.ಎಸ್.ರಾವ್ ರಸ್ತೆಯ ಎಕ್ಸೆಲ್ ಮಿಸ್ಚೀಫ್ ಮಾಲ್ ಇದರ ಗ್ರೌಂಡ್ ಫ್ಲೋರ್ ನಲ್ಲಿ ‘ರೋಯಲ್ ಗಝೆಬೊ’ ರೆಸ್ಟೋರೆಂಟ್ ರವಿವಾರ ಉದ್ಘಾಟನೆಗೊಂಡಿತು.
‘ಗೋಲ್ಡ್ ಪ್ಯಾಲೇಸ್’ ಇದರ ಆಡಳಿತ ನಿರ್ದೇಶಕ ಅಬ್ದುಲ್ ಖಾದರ್ ರೆಸ್ಟೋರೆಂಟ್ ಉದ್ಘಾಟಿಸಿದರು. ಈ ಸಂದರ್ಭ ‘ಗೋಲ್ಡ್ ಪ್ಯಾಲೇಸ್’ ಪಾಲುದಾರ ಮುಹಮ್ಮದ್ ಸೂಫಿ, ರೆಸ್ಟೋರೆಂಟ್ ನ ಪಾಲುದಾರರಾದ ನೌಶಾದ್ ಯುಕೆ, ನಿಹಾಲ್ ಯುಕೆ, ಶಬೀರ್ ಮತ್ತಿತರರು ಪಾಲ್ಗೊಂಡಿದ್ದರು. ಅಬ್ದುರ್ರಹ್ಮಾನ್ ದುಆ ನೆರವೇರಿಸಿದರು.