ಸಜಿಪನಡು: ಡಿ.19ರಂದು ಶಾಲಾ ವಾರ್ಷಿಕೋತ್ಸವ, ವಿಜ್ಞಾನ ಮಾದರಿ ವಸ್ತು ಪ್ರದರ್ಶನ
ಬಂಟ್ವಾಳ, ಡಿ.12: ಸರಕಾರಿ ಪ್ರೌಢಶಾಲೆ ಸಜಿಪನಡು ಇದರ ವಾರ್ಷಿಕೋತ್ಸವದ ಪ್ರಯುಕ್ತ ಡಿ.19 ರಂದು ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ಅನುದಾನಿತ ಖಾಸಗಿ ಪ್ರಾಥಮಿಕ, ಪ್ರೌಢ, ಪದವಿಪೂರ್ವ, ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯನ್ನು ಆಯೋಜಿಸಿದೆ.
ವೈಜ್ಞಾನಿಕ ತತ್ವಗಳು ಅಳವಡಿಸಲಾದ ಕೃಷಿ ಉಪಕರಣಗಳ ಪ್ರದರ್ಶನಕ್ಕೆ ರೈತರಿಗೆ ಅವಕಾಶವಿದೆ. ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಭಾಗವಹಿಸುವವರು ಡಿ.18ರೊಳಗೆ ತಮ್ಮ ಹೆಸರನ್ನು ನೋಂದಾಯಿಸಬೇಕು. ಒಬ್ಬ ಸ್ಪರ್ಧಿ 2 ಮಾದರಿ ತಯಾರಿಸಿ ಪ್ರದರ್ಶಿಸಲು ಅವಕಾಶವಿದೆ. ಅತ್ಯುತ್ತಮ ಮಾದರಿಗೆ ಪ್ರಥಮ, ದ್ವಿತೀಯ ಎಂದು ಪರಿಗಣಿಸಿ ನಗದು ಬಹುಮಾನದೊಂದಿಗೆಟ್ರೋಫಿ ನೀಡಿ ಗೌರವಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊ. 9108220134 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
Next Story