ಪತ್ರಕರ್ತರ 35ನೇ ರಾಜ್ಯ ಸಮ್ಮೇಳನಕ್ಕೆ ಆಹ್ವಾನ
ಧರ್ಮಸ್ಥಳ, ಫೆ.10: ಮಂಗಳೂರಿನ ಪುರಭವನದಲ್ಲಿ ಮಾ.7 ಮತ್ತು 8ರಂದು ನಡೆಯಲಿರುವ ಪತ್ರಕರ್ತರ 35ನೇ ರಾಜ್ಯ ಸಮ್ಮೇಳನಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಅವರನ್ನು ಸೋಮವಾರ ಅಧಿಕೃತವಾಗಿ ಆಹ್ವಾನಿಸಲಾಯಿತು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಶೀನಿವಾಸ ನಾಯಕ್ ಇಂದಾಜೆ, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಜಿಲ್ಲಾ ಸಂಘದ ನಗರ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಗ್ರಾಮಾಂತರ ಕಾರ್ಯದರ್ಶಿ ಭುವನೇಶ್ವರ ಜಿ. ಗೇರುಕಟ್ಟೆ, ಕಾರ್ಯಕಾರಿ ಸಮಿತಿ ಸದಸ್ಯ ಭಾಸ್ಕರ ರೈ ಕಟ್ಟ ಉಪಸ್ಥಿತರಿದ್ದರು.
ಜಿಲ್ಲಾ ಸಂಘದ ನಿಯೋಗದ ಜೊತೆಗೆ ಬೆಳ್ತಂಗಡಿ ಸಂಘದ ಅಧ್ಯಕ್ಷ ಅಶ್ರಫ್ ಆಲಿಕುಂಞಿ, ಕಾರ್ಯದರ್ಶಿ ಮನೋಹರ ಬಳಂಜ, ಕೋಶಾಧಿಕಾರಿ ಚೈತ್ರೇಶ್ ಇಳಂತಿಲ, ಜೊತೆ ಕಾರ್ಯದರ್ಶಿ ಗುರುಮೂರ್ತಿ ಶಗ್ರಿತ್ತಾಯ ಕೊಕ್ಕಡ, ಸದಸ್ಯರಾದ ಮಂಜುನಾಥ ರೈ, ಬಿ.ಎಸ್ ಕುಲಾಲ್, ಆರ್.ಎನ್ ಪೂವಣಿ, ಧನಕೀರ್ತಿ ಆರಿಗಾ, ಪದ್ಮನಾಭ ಕುಲಾಲ್ ವೇಣೂರು ಮತ್ತು ಜಾರಪ್ಪ ಪೂಜಾರಿ ಬೆಳಾಲು ಉಪಸ್ಥಿತರಿದ್ದರು.