ಗಾಂಜಾ ಸೇವನೆ: ನಾಲ್ವರ ಬಂಧನ
ಮಣಿಪಾಲ, ಫೆ.15: ಗಾಂಜಾ ಸೇವನೆಗೆ ಸಂಬಂಧಿಸಿ ಮಣಿಪಾಲ ಪೊಲೀಸರು ನಾಲ್ಕು ಮಂದಿಯನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಫೆ.4ರಂದು ಮಣಿಪಾಲದ ಮಾಂಡವಿ ಎಮಾರಾಲ್ಡ್ ಆಪಾರ್ಟ್ಮೆಂಟ್ ಬಳಿ ಮೊಯಿಜ್ ಅಬ್ದುಲ್ ಮಜೀದ್(21) ಹಾಗೂ ಆರೀಶ್ ಹುಸೇನ್ (21) ಮತ್ತು ಫೆ.2ರಂದು ಮಣಿಪಾಲ ಪೊಲೀಸ್ ಠಾಣೆಗೆ ಭೇಟಿ ನೀಡಿದ ರಿದಾ ಆಯಿಷಾ ಸಜೀದ್(19) ಹಾಗೂ ಮಿಲಿಂದ್ ಲಜ್ಜು(19) ಎಂಬವರನ್ನು ಮಾದಕ ವಸ್ತು ಸೇವನೆ ಮಾಡಿದ ಅನುಮಾನದ ಮೇರೆಗೆ ವಶಕ್ಕೆ ಪಡೆದು, ಮಣಿಪಾಲ ಕೆಎಂಸಿ ತಜ್ಞರ ಮುಂದೆ ಹಾಜರುಪಡಿಸಿ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ ಇವರೆಲ್ಲ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story