ಕೋಡಿಕಲ್ : ಬದ್ರಿಯಾ ಯಂಗ್ ಫ್ರೆಂಡ್ಸ್ ಅಸೋಸಿಯೇಷನ್ ವತಿಯಿಂದ ರಮಝಾನ್ ಕಿಟ್ ವಿತರಣೆ
ಕೋಡಿಕಲ್ : ಬದ್ರಿಯಾ ಯಂಗ್ ಫ್ರೆಂಡ್ಸ್ ಅಸೋಸಿಯೇಷನ್ ಕೋಡಿಕಲ್ ಇದರ ವತಿಯಿಂದ ರಮಝಾನ್ ಹಾಗು ಕೋವಿಡ್-19 ಪ್ರಯುಕ್ತ ಊರ ಪರವೂರ ಎಲ್ಲಾ ಧರ್ಮದವರಿಗೆ ದಿನಸಿ ಸಾಮಗ್ರಿಗಳ ಕಿಟ್ ವಿತರಿಸಲಾಯಿತು.
ಈ ಸಂದರ್ಭ ಬದ್ರಿಯಾ ಯಂಗ್ ಫ್ರೆಂಡ್ಸ್ ಅಸೋಸಿಯೇಷನ್ ಇದರ ಗೌರವಾಧ್ಯಕ್ಷ ಮುಹಮ್ಮದ್ ಹಾರಿಸ್, ಅಧ್ಯಕ್ಷ ಅಬ್ದುಲ್ ನಾಸಿರ್ ಎಚ್.ಟಿ, ಉಪಾಧ್ಯಕ್ಷ ಮುಹಮ್ಮದ್ ತಂಝಿಲ್, ಪ್ರ. ಕಾರ್ಯದರ್ಶಿ ಮುಝಮ್ಮಿಲ್ ಅಹ್ಮದ್, ಕೋಶಾಧಿಕಾರಿ ಮುಹಮ್ಮದ್ ಝಿಯಾದ್, ಉಮ್ಮರ್ ಫಾರೂಕ್, ಮುಹಮ್ಮದ್ ಕೋಯಾ, ಅಬ್ದುಲ್ ಜಬ್ಬಾರ್, ಮುಹಮ್ಮದ್ ಅಶ್ರಫ್ ಮತ್ತಿತರ ಸದಸ್ಯರು ಉಪಸ್ಥಿತರಿದ್ದರು.