ಕುಪ್ಪೆಪದವು : ಫ್ಯಾನ್ಸಿ ಅಂಗಡಿಯಲ್ಲಿ ಕಳ್ಳತನ
ಕುಪ್ಪೆಪದವು, ಮೇ 20: ಇಲ್ಲಿನ ಶ್ರೀ ರಾಮಕೃಷ್ಣ ಭಜನಾ ಮಂದಿರದ ಕಟ್ಟಡದಲ್ಲಿರುವ ಫ್ಯಾನ್ಸಿ ಅಂಗಡಿಯೊಂದಕ್ಕೆ ಮಂಗಳವಾರ ರಾತ್ರಿ ನುಗ್ಗಿದ ಕಳ್ಳರು ಸುಮಾರು 10,000 ರೂ. ನಗದು ಹಾಗೂ 7,000 ರೂ. ಮೌಲ್ಯದ ಫ್ಯಾನ್ಸಿ ಬಟ್ಟೆಬರೆ ಕಳವುಗೈದಿದ್ದಾರೆ.
ಅಂಗಡಿಯ ಹಿಂಬದಿಯ ಕಿಟಕಿ ಬಾಗಿಲಿನ ಸರಳು ಮುರಿದು ಒಳಪ್ರವೇಶಿಸಿದ್ದಾರೆ. ಸುಮಿತ್ರಾ ಎಂಬವರಿಗೆ ಸೇರಿದ ಅಂಗಡಿ ಇದಾಗಿದ್ದು, ಬುಧವಾರ ಬೆಳಗ್ಗೆ ಅಂಗಡಿಯ ಬಾಗಿಲು ತೆರೆದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ಬಜ್ಪೆಪೊಲೀಸರು ಆಗಮಿಸಿ, ಸ್ಥಳೀಯ ಸಿಸಿ ಟಿವಿ ಫೂಟೇಜ್ ಪರಿಶೀಲನೆ ನಡೆಸಿದ್ದಾರೆ. ಸುಮಿತ್ರಾರ ಸಂಬಂಧಿ ಶಶಿ ಎಂಬವರು ದೂರು ನೀಡಿದ್ದಾರೆ. ತನಿಖೆ ಮುಂದುವರಿದಿದೆ.
Next Story