ಉಳ್ಳಾಲ: ಮಂಗಳವಾರ ಎರಡು ಕೊರೋನ ಪಾಸಿಟಿವ್ ಪ್ರಕರಣ ಪತ್ತೆ
ಉಳ್ಳಾಲ,ಜು.28: ಉಳ್ಳಾಲ ನಗರ ಸಭಾ ವ್ಯಾಪ್ತಿಯಲ್ಲಿ ಮಂಗಳವಾರ ಎರಡು ಕೊರೋನ ಪಾಸಿಟಿವ್ ಪ್ರಕರಣ ದಾಖಲಾದ ಬಗೆ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ,.
ಉಳ್ಳಾಲ ನಗರ ಸಭಾ ವ್ಯಾಪ್ತಿಯ ಬಸ್ತಿಪಡ್ಪುವಿನಲ್ಲಿ 63 ವರ್ಷದ ಮಹಿಳೆ, ಉಳ್ಳಾಲದಲ್ಲಿ 51 ವರ್ಷದ ಮಹಿಳೆ ಗೆ ಸೋಂಕು ದೃಢಪ ಟ್ಟಿದೆ
ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾಸ್ಟೆಲ್ ವೊಂದರಲ್ಲಿರುವ 25,27 ವರ್ಷದ ಇಬ್ಬರು ವೈದ್ಯಕೀಯ ವಿದ್ಯಾರ್ಥಿನಿಯರಿಗೆ ಸೋಂಕು ದೃಢಪಟ್ಟಿದೆ.
ಕೊಣಾಜೆ ಗ್ರಾಮದ ಲ್ಲಿ 51,48 ವರ್ಷದ ಇಬ್ಬರು ಪುರುಷರು, ಮುನ್ನೂರು ಗ್ರಾಮದ ಸುಭಾಶ್ ನಗರದಲ್ಲಿ 26 ವರ್ಷದ ಪುರುಷ, ಬೆಳ್ಮ ಗ್ರಾಮದ ದೇರಳಕಟ್ಟೆ ಯಲ್ಲಿ 26 ವರ್ಷದ ಯುವತಿ, ಕಿನ್ಯ ಗ್ರಾಮದಲ್ಲಿ 54 ವರ್ಷದ ಪುರುಷನಿಗೆ ಕೊರೋನ ಪಾಸಿಟಿವ್ ಆಗಿದೆ. ಇದರಿಂದ ಜೂ.23 ರಿಂದ ಈವರೆಗೆ ಉಳ್ಳಾಲ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒಟ್ಟು 482 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
Next Story