ಕುವೈತ್ನಿಂದ ಮಂಗಳೂರಿಗೆ ಚಾರ್ಟರ್ಡ್ ವಿಮಾನ
ಮಂಗಳೂರು, ಆ.12: ಕುವೈತ್ನಿಂದ ಚಾರ್ಟರ್ಡ್ ವಿಮಾನ ಮಂಗಳೂರು ವಿಮಾನ ನಿಲ್ದಾಣಕ್ಕೆ ಗುರುವಾರ ನಸುಕಿನ ಜಾವ 2:30ಕ್ಕೆ ಬರಲಿದೆ.
ಚಾರ್ಟರ್ಡ್ ವಿಮಾನವನ್ನು ಅಲ್ ರಶೀದ್ ಸಂಸ್ಥೆ ವ್ಯವಸ್ಥೆ ಮಾಡಿದೆ. 114 ಪ್ರಯಾಣಿಕರು ಹಾಗೂ ಮೂವರು ಮಕ್ಕಳು ಆಗಮಿಸಲಿದ್ದಾರೆ. ಕುವೈತ್ನಿಂದ ಮಂಗಳೂರಿಗೆ ಈ ಚಾರ್ಟರ್ಡ್ ಫ್ಲೈಟ್ಗಾಗಿ 45 ದಿನಗಳಿಂದ ಡಿಜಿಸಿಎ ನಿಂದ ಅನುಮತಿ ಸಿಕ್ಕಿರಲಿಲ್ಲ. ಕರ್ನಾಟಕದ ಎನ್ಆರ್ಐ ವೇದಿಕೆಯ ಮಾಜಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಪ್ರಯತ್ನದಿಂದ ಸಾಕಾರವಾಗಿದೆ ಎಂದು ಅನಿವಾಸಿ ಭಾರತೀಯ ಮೋಹನದಾಸ್ ಕಾಮತ್ ತಿಳಿಸಿದ್ದಾರೆ.
Next Story