ಕಾಪು: ವಿದ್ಯಾರ್ಥಿಯಿಂದ 8 ಅಡಿಯ ಬಾಕ್ಸ್ ಗಣಪ ರಚನೆ
ಕಾಪು, ಆ.20: ಕಟಪಾಡಿಯ ವಿದ್ಯಾರ್ಥಿ ಪ್ರಥಮ್ ಕಾಮತ್ ಕಟಪಾಡಿ ಕಟಪಾಡಿಯಲ್ಲಿರುವ ತಮ್ಮ ಚಿಲ್ಮಿ ಮನೆಯಲ್ಲಿ ಚೌತಿ ಹಬ್ಬಕ್ಕಾಗಿ 8 ಅಡಿ ಉದ್ದದ ಬಾಕ್ಸ್ ಗಣಪ ಕಲಾಕೃತಿಯನ್ನು ರಚಿಸಿದ್ದಾರೆ.
ಬಾಲ ಜಾದುಗಾರ ಹಾಗೂ ಚಿತ್ರಕಾರ ಪ್ರಸ್ತುತ ಕಟಪಾಡಿಯ ಎಸ್.ವಿ.ಎಸ್ ಆಂಗ್ಲಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿಯಾಗಿರುವ ಪ್ರಥಮ್ ಕಾಮತ್ ಕಟಪಾಡಿ, ಚಿತ್ರಕಲಾ ಅಧ್ಯಾಪಕರಾದ ರಮೇಶ್ ರಾವ್ ಉಡುಪಿ, ಪ್ರಸಾದ್ ರಾವ್ ಮತ್ತು ವೆಂಕಿ ಪಲಿಮಾರು ಮಾರ್ಗದರ್ಶನದಲ್ಲಿ ಈ ವಿಶೇಷ ಗಣಪ ಕಲಾಕೃತಿಯನ್ನು ರಚಿಸಿದ್ದಾರೆ.
Next Story