ಇಂದು ‘ದಿ ಹೌಸ್ ಆಫ್ ಮಾಂಟೆಸರಿ’ ಆರಂಭ
ಮಂಗಳೂರು, ಜೂ.4: ‘ದಿ ಹೌಸ್ ಆಫ್ ಮಾಂಟೆಸರಿ’ ನಗರದ ಹೈಲ್ಯಾಂಡ್ ಸಿಲ್ವ ರೋಡ್ನ ಮಂಗಳಾದ ಪ್ರಥಮ ಮಹಡಿಯಲ್ಲಿ ಜೂ.5ರಂದು ಉದ್ಘಾಟನೆಗೊಳ್ಳಲಿದೆ ಎಂದು ಸಂಸ್ಥೆಯ ಸಂಚಾಲಕಿ ಆಯಿಷಾ ರಹ್ಮಾನ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಉದ್ಘಾಟಿಸುವರು. ಶಾಸಕ ಐವನ್ ಡಿಸೋಜ, ಯೆನೆಪೊಯ ಸಮೂಹ ಸಂಸ್ಥೆಯ ನಿರ್ದೇಶಕ ವೈ.ಮುಹಮ್ಮದ್ ಕುಂಞಿ, ಪಾಲಿಕೆ ಸದಸ್ಯ ಅಬ್ದುರ್ರವೂಫ್ ಮುಖ್ಯ ಅತಿಥಿಗಳಾಗಿರುವರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಟಿ.ಅಬ್ದುರ್ರಹ್ಮಾನ್, ಕೆ.ಎಸ್.ಅಬೂಬಕರ್ ಉಪಸ್ಥಿತರಿದ್ದರು.
Next Story