ಉಪನ್ಯಾಸಕಿ ಸಫಿಯಾಗೆ ಪಿಎಚ್ಡಿ ಪದವಿ
ಮಂಗಳೂರು, ಸೆ.17: ಮಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಉಪನ್ಯಾಸಕಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಿಎಚ್ಡಿ ಪದವಿ ಪಡೆದಿದ್ದಾರೆ.
ಇಂಪ್ಯಾಕ್ಟ್ ಆಫ್ ಸೋಶಿಯಲ್ ನೆಟ್ವರ್ಕಿಂಗ್ ಸೈಟ್ಸ್ ಎಮಂಗ್ ಮೀಡಿಯಾ ಪ್ರೊೆಶನಲ್ಸ್ ಇನ್ ಕರ್ನಾಟಕ (ಕರ್ನಾಟಕದ ಮಾಧ್ಯಮ ವೃತ್ತಿಪರರಲ್ಲಿ ಸಾಮಾಜಿಕ ಜಾಲತಾಣಗಳ ಪ್ರಭಾವ’ ಎಂಬ ವಿಷಯದಲ್ಲಿ ಸಫಿಯಾ ಅವರು ಮಂಡಿಸಿದ ಸಂಶೋಧನಾ ಕಾರ್ಯಕ್ಕಾಗಿ ಪಿಎಚ್ಡಿ ಪದವಿ ದೊರಕಿದೆ.
ಪತ್ರಿಕೋದ್ಯಮ ವಿಭಾದ ನಿವೃತ್ತ ಉಪನ್ಯಾಸಕಿ ಪ್ರೊ. ವಹೀದಾ ಸುಲ್ತಾನಾ ಅವರ ಮಾರ್ಗದರ್ಶನದಲ್ಲಿ ಸಫಿಯಾ ಅವರು ಮಹಾ ಪ್ರಬಂಧವನ್ನು ರಚಿಸಿದ್ದರು. ಸಫಿಯಾ ದಿ. ಎಂ. ಅಬ್ದುಲ್ ಹಮೀದ್ ವೇಣೂರು ಮತ್ತು ರಾಬಿಯಮ್ಮರ ಪುತ್ರಿಯಾಗಿದ್ದು, ನಗರದ ಆನ್ಲೈನ್ ಮಾಧ್ಯಮವೊಂದರ ಸಂಪಾದಕ ನಯೀಮ್ ಸಿದ್ದೀಕಿಯವರ ಪತ್ನಿ.
Next Story