ಉಡುಪಿಯಲ್ಲೂ ಪೊಲೀಸರ ಹೆಸರಿನಲ್ಲಿ ನಕಲಿ ಫೇಸ್ಬುಕ್ ಅಕೌಂಟ್
ಉಡುಪಿ, ಸೆ.18: ಉಡುಪಿಯಲ್ಲೂ ಪೊಲೀಸರ ಹೆಸರಿನಲ್ಲಿ ನಕಲಿ ಫೇಸ್ಬುಕ್ ಅಕೌಂಟ್ ಇರುವುದು ಇದೀಗ ಬೆಳಕಿಗೆ ಬಂದಿದೆ. ದುಷ್ಕರ್ಮಿಗಳು ಎಸ್ಪಿ ಅವರ ಹೆಸರಿನಲ್ಲೇ ನಕಲಿ ಅಕೌಂಟ್ ತೆರೆದಿದ್ದಾರೆ.
ಕರಾವಳಿ ಕಾವಲು ಪಡೆಯ ಎಸ್ಪಿ ಅವರ ಪೋಟೊ ಬಳಸಿ ಈ ನಕಲಿ ಅಕೌಂಟ್ನ್ನು ತೆರೆಯಲಾಗಿದೆ. ಈ ನಕಲಿ ಫೇಸ್ಬುಕ್ ಅಕೌಂಟ್ಗೆ ಕರಾವಳಿ ಕಾವಲು ಪಡೆಯ ಎಸ್ಪಿ ಚೇತನ್ ಕುಮಾರ್ ಅವರ ಫೋಟೊ ಅನ್ನು ಬಳಸಲಾಗಿದೆ.
ಈ ನಕಲಿ ಅಕೌಂಟ್ನ್ನು ಇಂದಷ್ಟೇ ಓಪನ್ ಮಾಡಲಾಗಿದೆ. ಅಕೌಂಟ್ ಪ್ರಾರಂಭಿಸಿದ ಅರ್ಧ ಗಂಟೆಯಲ್ಲೇ ಪೊಲೀಸರು ಅದನ್ನು ಪತ್ತೆ ಹಚ್ಚಿದ್ದು, ಈ ಬಗ್ಗೆ ಉಡುಪಿ ಮತ್ತು ಬೆಂಗಳೂರಿನ ಸೈಬರ್ ಕ್ರೈಂಗೆ ಚೇತನ್ ಕುಮಾರ್ ಅವರು ದೂರು ನೀಡಿದ್ದಾರೆ. ಇದರೊಂದಿಗೆ ಫೇಸ್ಬುಕ್ಗೂ ದೂರು ನೀಡಲಾಗಿದೆ. ಕೋಸ್ಟಲ್ ಎಸ್ಪಿ- ಎಸ್.ಪಿ.ಸಿಂಗ್- ಹೆಸರಿನಲ್ಲಿ ಫೇಕ್ ಐಡಿ ಬಳಸಲಾಗಿದೆ.
Next Story