ಉಡುಪಿ ಜಿಲ್ಲೆಯಲ್ಲಿ 214ಮಿ.ಮೀ. ವಾಡಿಕೆಗಿಂತ ಅಧಿಕ ಮಳೆ
ಉಡುಪಿ, ಸೆ.20: ಜಿಲ್ಲೆಯಾದ್ಯಂತ ರವಿವಾರ ಒಂದೇ ದಿನದಲ್ಲಿ 214 ಮಿ.ಮೀ. ವಾಡಿಕೆಗಿಂತ ಹೆಚ್ಚು ುಳೆಯಾಗಿರುವ ಬಗ್ಗೆ ವರದಿಯಾಗಿದೆ
ಜಿಲ್ಲೆಯಲ್ಲಿ ವಾಡಿಕೆ ಮಳೆ 12 ಮಿ.ಮೀ. ಆಗಿದ್ದು, ಸೆ.20ರಂದು 226 ಮಿ.ಮೀ. ಮಳೆಯಾಗಿದೆ. ಈ ಮೂಲಕ ವಾಡಿಕೆಗಿಂತ 214 ಮಿ.ಮೀ. ಹೆಚ್ಚಿನ ಮಳೆಯಾಗಿದೆ. ಉಡುಪಿ 399ಮಿ.ಮೀ., ಕುಂದಾಪುರ 88 ಮಿ.ಮೀ., ಕಾರ್ಕಳ 293 ಮಿ.ಮೀ., ಬ್ರಹ್ಮಾವರ 251ಮಿ.ಮೀ., ಬೈಂದೂರು 41 ಮಿ. ಮೀ., ಕಾಪು 296 ಮಿ.ಮೀ., ಹೆಬ್ರಿ 220 ಮಿ.ಮೀಟರ್ ಮಳೆಯಾಗಿದೆ ಎಂದು ಮೂಲಗಳು ತಿಳಿಸಿವೆ.
Next Story