ಮಂಜನಾಡಿಯಲ್ಲಿ ಸರಣಿ ಕಳ್ಳತನ : ನಗ ನಗದು ಕಳವು
ಕೊಣಾಜೆ : ಮಂಜನಾಡಿ ಬಳಿ ಮೂರು ಮನೆಗಳಿಂದ ಕಳ್ಳತನವಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಮಂಜನಾಡಿ ತೌಡುಗೋಳಿ ಕ್ರಾಸ್ ನ ಅಶ್ರಫ್, ಮಂಜನಾಡಿ ಅನ್ಸಾರ್ ನಗರದ ಮುಸ್ತಫ ಹಾಗೂ ಮಂಜನಾಡಿ ಮಂಗಳಾಂತಿಯ ಸೂಫಿಕುಂಞಿ ಎಂಬವರ ಮನೆಗಳಿಗೆ ಕಳ್ಳರು ನುಗಿದ್ದಾರೆ. ಸೂಫಿಕುಂಞಿ ಅವರ ಮನೆಯಿಂದ ಅಪಾರ ಪ್ರಮಾಣದ ನಗ ನಗದು ದೋಚಿರುವ ಬಗ್ಗೆ ವರದಿಯಾಗಿದೆ.
ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳಕ್ಕೆ ಎಸಿಪಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.
Next Story