ಉಡುಪಿ, ಸೆ.23: ಕುಂಜಿಬೆಟ್ಟು ಬುಡ್ನಾರು ನಿವಾಸಿ ದೀಕ್ಷಿತ್ (27) ಎಂಬವರು 2019ರ ಡಿ.14ರಿಂದ ನಾಪತ್ತೆಯಾಗಿದ್ದಾರೆ. ಈತ 5.2 ಅಡಿ ಎತ್ತರ ವಿದ್ದು, ಕಪ್ಪು ಮೈಬಣ್ಣ ಸಾಧಾರಣ ಮೈಕಟ್ಟು ಹೊಂದಿದ್ದಾರೆ. ಕನ್ನಡ, ತುಳು ಭಾಷೆ ಬಲ್ಲವರಾಗಿದ್ದು, ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.