ಅಕ್ರಮ ಜಾನುವಾರು ಸಾಗಾಟ: ಮೂವರ ಸೆರೆ
ಶಿರ್ವ, ಸೆ. 24: ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಶಿರ್ವ ಪೊಲೀಸರು ಮುಟ್ಲಪಾಡಿ ಶಾಲೆಯ ಬಳಿ ಸೆ.23ರಂದು ಬಂಧಿಸಿದ್ದಾರೆ.
ಮಹಮ್ಮದ್ ನದೀಂ, ಯಾಸಿನ್, ಸಂಶುದ್ದೀನ್ ಬಂಧಿತ ಆರೋಪಿ. ಇವರು ಟಾಟಾ ಎಸ್ ವಾಹನದಲ್ಲಿ ಮೂರು ದನಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದರೆನ್ನಲಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story