ವಿ4 ನ್ಯೂಸ್ ಚಾನೆಲ್ ನಲ್ಲಿ ಬೇಕಲ್ ಉಸ್ತಾದರ ಸಂಸ್ಮರಣಾ ಭಾಷಣ
ಮಂಗಳೂರು, ಸೆ.27: ಇತ್ತೀಚೆಗೆ ನಿಧನರಾದ ಹಿರಿಯ ವಿದ್ವಾಂಸ ಹಾಗೂ ಉಡುಪಿ, ಚಿಕ್ಕಮಗಳೂರು, ಹಾಸನ, ದ.ಕ. ಜಿಲ್ಲೆಗಳ ನೂರಾರು ಮೊಹಲ್ಲಾಗಳ ಖಾಝಿ ಪಿ.ಎಂ.ಇಬ್ರಾಹೀಂ ಮುಸ್ಲಿಯಾರ್ ಬೇಕಲ್ ಅವರ ಸಂಸ್ಮರಣಾ ಭಾಷಣವು ಸಿಲ್ ಸಿಲಾ ಮೀಡಿಯಾ ವತಿಯಿಂದ ‘ ವಿ4 ನ್ಯೂಸ್ ‘ ಟಿವಿ ಚಾನೆಲ್ ಹಾಗೂ ‘ಸಿಲ್ ಸಿಲಾ ಮೀಡಿಯಾ’ ಯೂಟ್ಯೂಬ್ ಚಾನೆಲ್ ನಲ್ಲಿ ಸೆ.28 ಮತ್ತು 29ರಂದು ಪ್ರಸಾರವಾಗಲಿದೆ.
ರಾತ್ರಿ 8:30ರಿಂದ 9:30ರ ತನಕ ಪ್ರಸಾರ ಕಾರ್ಯಕ್ರಮದಲ್ಲಿ ಸೆ.28ರಂದು ಎಸ್. ವೈ.ಎಸ್. ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಹಾಗೂ ಸೆ.29ರಂದು ಸುನ್ನೀ ಜಂ ಇಯ್ಯತುಲ್ ಉಲಮಾದ ರಾಜ್ಯ ಉಪಾಧ್ಯಕ್ಷ
ಕೆ.ಸಿ.ರೋಡ್ ಹುಸೈನ್ ಸ-ಅದಿ ಭಾಷಣ ಮಾಡಲಿದ್ದಾರೆ ಎಂದು ಸಿಲ್ ಸಿಲಾ ಮೀಡಿಯಾದ ನಿರ್ದೇಶಕ ಪಿ.ಎಸ್.ತ್ವಾಹ ಸಅದಿ ಪಾಣೆಮಂಗಳೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story