ಮಂಗಳೂರು : ಹಿರಿಯ ಉದ್ಯಮಿ ಅಬ್ದುಲ್ ನಾಸಿರ್ ಎ.ಕೆ. ನಿಧನ
ಮಂಗಳೂರು, ಸೆ. 29: ನಗರದ ಪಾಂಡೇಶ್ವರದ ರೊಝಾರಿಯೊ ಚರ್ಚ್ ರಸ್ತೆಯ ಶಫೀಕ್ ಮಂಝಿಲ್ ನಿವಾಸಿ ಹಾಗೂ ಹಂಪನಕಟ್ಟೆಯ ಶೂ ಬಝಾರ್ ಮಾಲಕ ಅಬ್ದುಲ್ ನಾಸಿರ್ ಎ.ಕೆ. (61) ಸೋಮವಾರ ತಡ ರಾತ್ರಿ ತನ್ನ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.
ಮೃತರು ಪತ್ನಿ, ನಾಲ್ವರು ಪುತ್ರರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಅವರು ಹಲವು ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು.
Next Story