ಮೂಡುಬಿದಿರೆಯಲ್ಲಿ ಕೊರೋನ ಟೆಸ್ಟ್ : 7 ಮಂದಿಗೆ ಪಾಸಿಟಿವ್
ಮೂಡುಬಿದಿರೆ : ಇಲ್ಲಿನ ಪುರಸಭೆ ಮತ್ತು ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಬುಧವಾರ ಸ್ವರ್ಣಮಂದಿರದಲ್ಲಿ ಕೋವಿಡ್ ಪರೀಕ್ಷೆ ಶಿಬಿರವು ನಡೆಯಿತು.
ಪುರಸಭಾ ಸದಸ್ಯ ಸುರೇಶ್ ಪ್ರಭು ಅವರು ತಾವೇ ಪರೀಕ್ಷೆಗೆ ಒಡ್ಡಿಕೊಳ್ಳುವ ಮೂಲಕ ಶಿಬಿರಕ್ಕೆ ಚಾಲನೆಯನ್ನು ನೀಡಿದರು. ಪುರಸಭಾ ಮುಖ್ಯಾಧಿಕಾರಿ ಇಂದು ಸಹಿತ ಪುರಸಭಾ ಸದಸ್ಯರು ಸೇರಿ ಒಟ್ಟು 59 ಮಂದಿ ಪರೀಕ್ಷೆ ಮಾಡಿಕೊಂಡರು. 57 ಮಂದಿಯಲ್ಲಿ 7 ಮಂದಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Next Story