ಶತಾಯುಷಿ ಕೇಶವ ಶೇಟ್ ನಿಧನ
ಮಂಗಳೂರು, ಅ.1: ನಗರದ ದೈವಜ್ಞ ಬ್ರಾಹ್ಮಣ ಸಮಾಜದ ಹಿರಿಯ ಸದಸ್ಯ, 102 ವರ್ಷ ಪ್ರಾಯದ ಶತಾಯುಷಿ ಕೇಶವ ಶೇಟ್ ಬುಧವಾರ ತನ್ನ ಪುತ್ರನ ಸ್ವಗೃಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿರುವರು.
ನಗರದ ಕೊಡಿಯಾಲಬೈಲ್ ಅಳಕೆ ನಿವಾಸಿಯಾಗಿದ್ದ ಅವರು ನುರಿತ ಸ್ವರ್ಣಕಾರರಾಗಿದ್ದರು. ಮೂಲತಃ ಉತ್ತರ ಕನ್ನಡದ ಕುಮಟಾ ಮೂರೂರಿನವರಾದ ಮೃತರು ಪತ್ನಿ, ಎಂಟು ಪುತ್ರಿಯರು, ಇಬ್ಬರು ಪುತ್ರರು ಹಾಗೂ ಅಪಾರ ಬಂಧು-ಬಳಗದವರನ್ನು ಅಗಲಿರುವರು.
Next Story