ಅ. 16: ಎಸ್ಕೆಎಸ್ಸೆಸ್ಸೆಫ್ ವಿಖಾಯ ವತಿಯಿಂದ ದುಬೈಯಲ್ಲಿ ರಕ್ತದಾನ ಶಿಬಿರ
ದುಬೈ : ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ಯುಎಇ ಸಮಿತಿಯ ಸಹಭಾಗಿತ್ವದಲ್ಲಿ ಎಸ್ಕೆಎಸ್ಸೆಸ್ಸೆಫ್ ವಿಖಾಯ ಕರ್ನಾಟಕ ಯುಎಇ ಸಮಿತಿಯ ವತಿಯಿಂದ ದುಬೈ ಲತೀಫ ಆಸ್ಪತ್ರೆಯಲ್ಲಿ ಅ. 16ರಂದು ಮಧ್ಯಾಹ್ನ 2 ರಿಂದ 5ಗಂಟೆ ತನಕ ರಕ್ತದಾನ ಶಿಬಿರ ನಡೆಯಲಿದೆ.
ಸಯ್ಯದ್ ಅಸ್ಗರ್ ಅಲೀ ತಂಙಲ್ ಉದ್ಘಾಟಿಸುವ ಈ ಶಿಬಿರದಲ್ಲಿ ಯುಎಇಯಲ್ಲಿರುವ ಸಮಸ್ತ ಅಭಿಮಾನಿಗಳು, ಸಾಮಾಜಿಕ ಸಹೃದಯರು ರಕ್ತ ದಾನ ಮಾಡಿ ಈ ಸಮಾಜಮುಖಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದರ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ರಕ್ತ ದಾನ ಮಹಾ ದಾನವಾಗಿರುತ್ತದೆ, ಕೋವಿಡ್ ಕಾಲದಲ್ಲಿ ಇದರ ಅವಶ್ಯಕತೆ ಹೆಚ್ಚುತ್ತಿದೆ, ರಕ್ತ ದಾನ ಶಿಬಿರದಲ್ಲಿ ಭಾಗವಹಿಸುವವರಿಗೆ ದುಬೈ ಮತ್ತು ಶಾರ್ಜಾ ದ ಆಯ್ದ ಸ್ಥಳಗಳಿಂದ ಸಾರಿಗೆ ವ್ಯವಸ್ಥೆ ಏರ್ಪಡಿಸಲಾಗುವುದು ಎಂದು ಎಸ್ಕೆಎಸ್ಸೆಸ್ಸೆಫ್ ವಿಖಾಯ ಕರ್ನಾಟಕ ಯುಎಇ ಸಮಿತಿಯ ಚಯರ್ ಮೇನ್ ನವಾಝ್ ಬಿಸಿ ರೋಡ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 0565812108, 0556078894, 0582698039
Next Story