ಹೂಡೆ: ಎಸ್ಡಿಪಿಐಯಿಂದ ಸಂವಾದ ಕಾರ್ಯಕ್ರಮ
ಉಡುಪಿ, ಅ.13: ಎಸ್ಡಿಪಿಐ ಹೂಡೆ ಘಟಕ ಸಮಿತಿ ವತಿಯಿಂದ ಸಂವಾದ ಕಾರ್ಯಕ್ರಮವನ್ನು ಇತ್ತೀಚೆಗೆ ಹೂಡೆ ಗ್ರಾಮದ ಕೆನರಾ ಬೀಚ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಎಸ್ಡಿಪಿಐ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್, ದೇಶದ ಪ್ರಸಕ್ತ ರಾಜಕೀಯ ಸ್ಥಿತಿಗತಿಗಳು ಮತ್ತು ಪರ್ಯಾಯ ರಾಜಕಾರಣದಲ್ಲಿ ಎಸ್ಡಿಪಿಐ ಪಕ್ಷದ ಪಾತ್ರದ ಕುರಿತು ಮಾಹಿತಿ ನೀಡಿದರು. ಅಧ್ಯಕ್ಷತೆಯನ್ನು ಎಸ್ಡಿಪಿಐ ಹೂಡೆ ಅಧ್ಯಕ್ಷ ಹೈದರ್ ಅಲಿ ವಹಿಸಿದ್ದರು.
ಈ ಸಂದರ್ಭದಲ್ಲಿ ಹಲವು ಮಂದಿ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಪಡೆದರು. ಪಕ್ಷದ ಹಿರಿಯ ಕಾರ್ಯಕರ್ತ ಇಸ್ಹಾಕ ಹೂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಇವಿ್ತುಯಾಜ್ ಕಾರ್ಯಕ್ರಮ ನಿರೂಪಿಸಿದರು.
Next Story