ಜುಗಾರಿ: ಇಬ್ಬರ ಬಂಧನ, 12 ಮಂದಿ ಪರಾರಿ
ಗಂಗೊಳ್ಳಿ, ಅ.17: ಗಂಗೊಳ್ಳಿ ದೊಡ್ಡಹಿತ್ಲು ಎಂಬಲ್ಲಿ ಅ.16ರಂದು ಇಸ್ಪೀಟ್ ಜುಗಾರಿ ಆಡುತ್ತಿದ್ದ ಇಬ್ಬರನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದು, ಉಳಿದ 12 ಮಂದಿ ಆರೋಪಿಗಳು ಪರಾರಿಯಾಗಿದ್ದಾರೆ.
ನಾಗರಾಜ ಖಾರ್ವಿ(35), ರೂಪೇಶ್ ಖಾರ್ವಿ(25) ಬಂಧಿತ ಆರೋಪಿ ಗಳು. ಉಳಿದ ಆರೋಪಿಗಳಾದ ಪ್ರವೀಣ ಖಾರ್ವಿ, ಸಂದೇಶ ಖಾರ್ವಿ, ಮಾಧವ ಖಾರ್ವಿ, ರಾಕೇಶ ಖಾರ್ವಿ, ಸೋಮಶೇಖರ ದೊಡ್ಡಹಿತ್ಲು, ಪ್ರವೀಣ ಖಾರ್ವಿ, ರವಿ ಖಾರ್ವಿ, ಸುರೇಶ್, ರಂಜಿತ ಪೂಜಾರಿ, ರಾಘವೇಂದ್ರ, ಬಾಬು ಹೊಸಪೇಟೆ, ಅರುಣ ಖಾರ್ವಿ ಎಂಬವರು ಪರಾರಿಯಾಗಿದ್ದಾರೆ. ಬಂಧಿತ ರಿಂದ 2,900ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story