ಕೋಳಿ ಅಂಕ: ಎಂಟು ಮಂದಿ ಬಂಧನ
ಕೋಟ, ಅ.18: ಕಾವಡಿ ಗ್ರಾಮದ ಸಣಗಲ್ ಎಂಬಲ್ಲಿರುವ ಹಾಡಿಯಲ್ಲಿ ಅ.17ರಂದು ಕೋಳಿ ಅಂಕ ಜುಗಾರಿ ನಡೆಸುತ್ತಿದ್ದ ಎಂಟು ಮಂದಿಯನ್ನು ಕೋಟ ಪೊಲೀಸರು ಬಂಧಿಸಿದ್ದಾರೆ.
ಹೂಡೆಯ ಸಂತೋಷ ಪೂಜಾರಿ(32), ಸಂತೆಕಟ್ಟೆಯ ಹರೀಶ ದೇವಾಡಿಗ (39), ಕೋಣಿಯ ಶಾಂತಾರಾಮ ಶೆಟ್ಟಿ(45), ಅಚ್ಲಾಡಿಯ ಮಂಜು ಮೊಗೇರ(40), ರಾಘವೇಂದ್ರ(39), ಮಂದಾರ್ತಿಯ ಸುಧಾಕರ(29), ಹಣೆಹಳ್ಳಿಯ ಸಂತೋಷ ಪೂಜಾರಿ(41), ಕಾವರಾಡಿಯ ಶೇಕ್ ಅನ್ಸಾರ್, (48) ಬಂಧಿತ ಆರೋಪಿಗಳು.
ಇವರಿಂದ 3,720ರೂ. ನಗದು, 5 ಕೋಳಿ ಒಟ್ಟು ಮೌಲ್ಯ 1,350ರೂ. ಮೌಲ್ಯದ ಐದು ಕೋಳಿಗಳು, ಎರಡು ಕೋಳಿ ಬಾಳ್, ಬೈಕ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story