ಬಾಂಬಿಲ: ಎಸ್ಕೆಎಸ್ಸೆಸ್ಸೆಫ್ ನಿಂದ ಮಿಫ್ತಾಹ್-2020 ಲೀಡರ್ಸ್ ಮೀಟ್
ಬಂಟ್ವಾಳ, ಅ.18: ಎಸ್ಕೆಎಸ್ಸೆಸ್ಸೆಫ್ ವಗ್ಗ ಕ್ಲಸ್ಟರ್ ವತಿಯಿಂದ 'ಮಿಫ್ತಾಹ್ -2020 ಲೀಡರ್ಸ್ ಮೀಟ್' ಕಾರ್ಯಕ್ರಮ ಬಾಂಬಿಲದ ದಾರುಸ್ಸಲಾಂ ಮದ್ರಸದಲ್ಲಿ ನಡೆಯಿತು.
ಬಾಂಬಿಲ ಕೇಂದ್ರ ಜುಮಾ ಮಸೀದಿಯ ಖತೀಬ್ ಇಬ್ರಾಹೀಂ ದಾರಿಮಿ ದುಆಗೈದರು. ಎಸ್ಕೆಎಸ್ಸೆಸ್ಸೆಫ್ ಬಾಂಬಿಲ ಶಾಖೆಯ ಅಧ್ಯಕ್ಷ ಇರ್ಷಾದ್ ದಾರಿಮಿ ಕಾರ್ಯಕ್ರಮ ಉದ್ಘಾಟಿಸಿದರು. ಎಸ್ಕೆಎಸ್ಸೆಸ್ಸೆಫ್ ವಗ್ಗ ಕ್ಲಸ್ಟರ್ ಅಧ್ಯಕ್ಷ ಖಾಸಿಂ ಅರ್ಷದಿ ಅಧ್ಯಕ್ಷತೆ ವಹಿಸಿದ್ದರು.
ಎಸ್ಕೆಎಸ್ಸೆಸ್ಸೆಫ್ ದ.ಕ. ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಿಯಾಝ್ ರಹ್ಮಾನಿ ಸಂಘಟನಾ ತರಗತಿ ನಡೆಸಿದರು. ಅಬ್ದುರ್ರಹ್ಮಾನ್ ನದ್ವಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಎಸ್ಕೆಎಸ್ಸೆಸ್ಸೆಫ್ ವಿಖಾಯ ದ.ಕ. ಜಿಲ್ಲಾ ಕೋ ಆರ್ಡಿನೇಟರ್ ಮುಸ್ತಫ ಕಟ್ಟದಪಡ್ಪು, ಬಾಂಬಿಲ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ಹಮಿದ್ ದೊಡ್ಡಮನೆ, ವಗ್ಗ ಕ್ಲಸ್ಟರ್ ವಿಖಾಯ ಕಾರ್ಯದರ್ಶಿ ಮುಹಮ್ಮದ್ ಅಲಿ ವಗ್ಗ, ಬಾಂಬಿಲ ಶಾಖೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಸಾಹಿಲ್ , ಕ್ಲಸ್ಟರ್ ವ್ಯಾಪ್ತಿಗೆ ಒಳಪಟ್ಟ ಎಲ್ಲಾ ಶಾಖೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಹಾಫಿಲ್ ಸಾಹಿಲ್ ಬಾಂಬಿಲ ಕಿರಾಅತ್ ಪಠಿಸಿದರು. ಎಸ್ಕೆಎಸ್ಸೆಸ್ಸೆಫ್ ವಗ್ಗ ಕ್ಲಸ್ಟರ್ ಪ್ರಧಾನ ಕಾರ್ಯದರ್ಶಿ ಶಾಹುಲ್ ಹಮೀದ್ ವಗ್ಗ ಸ್ವಾಗತಿಸಿದರು.