ಕಾಸರಗೋಡು ಜಿಲ್ಲಾಧಿಕಾರಿ ಹೆಸರಲ್ಲಿ ನಕಲಿ ಇ-ಮೇಲ್ ರವಾನೆ
ಕಾಸರಗೋಡು : ಕಾಸರಗೋಡು ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬು ಅವರ ಹೆಸರಲ್ಲಿ ನಕಲಿ ಇ-ಮೇಲ್ ಸಂದೇಶವೊಂದು ಹರಡುತ್ತಿದೆ. ಈ ಬಗ್ಗೆ ಸಾರ್ವಜನಿಕರು ಜಾಗರೂಕತೆ ಪಾಲಿಸಬೇಕು. ಯಾರೂ ಮೋಸ ಹೋಗ ಕೂಡದು ಎಂದು ಅವರು ತಿಳಿಸಿದ್ದಾರೆ.
ತಲಾ 5 ಸಾವಿರ ರೂ. ಮೌಲ್ಯದ 4 ಅಮೆಝೋನ್ ಈ-ಕಾರ್ಡ್ ಖರೀದಿಸಿ jamsteh08@gmail.com ಎಂಬ ಇ-ಮೇಲ್ ಗೆ ಜಿಲ್ಲಾಧಿಕಾರಿ ಅವರ ಹೆಸರಲ್ಲಿ ರವಾನಿಸುವಂತೆ ನಕಲಿ ಸಂದೇಶವೊಂದು ಜಿಲ್ಲಾ ಇಲಾಖೆ ಮುಖ್ಯಸ್ಥರಿಗೆ ಲಭಿಸಿದೆ. ಜಿಲ್ಲಾಧಿಕಾರಿ ಅವರು ತಮ್ಮ ಸ್ವಂತ ಐಪ್ಯಾಡ್ ನಿಂದ ಈ ಸಂದೇಶ ರವಾನಿಸುತ್ತಿದ್ದಾರೆ ಎಂಬ ರೀತಿಯ ಸಂದೇಶ ಇಲ್ಲಿ ರವಾನೆಗೊಂಡಿದೆ.
executivedirector29@gmail.com ಎಂಬ ಇ-ಮೇಲ್ ನಿಂದ ಈ ಹುಸಿ ಸಂದೇಶ ರವಾನೆಯಾಗಿದೆ. ಇದು ನಕಲಿ ಎಂಬುದು ತನಿಖೆಯಿಂದ ಖಚಿತಗೊಂಡಿದೆ. ಈ ಬಗ್ಗೆ ಜಾಗರೂಕತೆ ಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ
Next Story