ಮಾಸ್ಕ್ : 12,400ರೂ. ದಂಡ ವಸೂಲಿ
ಉಡುಪಿ, ಅ.29: ಜಿಲ್ಲೆಯ ಸಾರ್ವಜನಿಕ ಸ್ಥಳಗಳಲ್ಲಿ ಅ.28ರಂದು ಮಾಸ್ಕ್ ಧರಿಸದೆ, ಸುರಕ್ಷತಾ ಅಂತರ ಕಾಪಾಡದೇ ಓಡಾಡುತ್ತಿದ್ದ ಒಟ್ಟು 124 ಮಂದಿಯಿಂದ ಒಟ್ಟು 14,900ರೂ. ದಂಡವನ್ನು ವಸೂಲಿ ಮಾಡಲಾಗಿದೆ.
ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಐದು ಮಂದಿಯಿಂದ 500ರೂ., ಪಂಚಾಯತ್ ವ್ಯಾಪ್ತಿಯಲ್ಲಿ 14 ಮಂದಿಯಿಂದ 1,400ರೂ., ಪೊಲೀಸ್ ಇಲಾಖೆ 92 ಮಂದಿಯಿಂದ 9,200ರೂ., ಅಬಕಾರಿ ಇಲಾಖೆ ಇಬ್ಬರಿಂದ 200ರೂ. ಹಾಗೂ ಕಂದಾಯ ಇಲಾಖೆ 10 ಮಂದಿಯಿಂದ 1000ರೂ. ದಂಡ ವಸೂಲಿ ಮಾಡಿವೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 14,84,650ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.
Next Story