ಮಲ್ಪೆ, ನ.10: ಮಲ್ಪೆ ಬಂದರಿನಲ್ಲಿ ಮೀನಿನ ವ್ಯವಹಾರದ ಲೆಕ್ಕಚಾರವನ್ನು ಪಡೆಯುವ ಕೆಲಸ ಮಾಡಿಕೊಂಡಿದ್ದ ಅಂಬಲಪಾಡಿ ಕಾಳಿಕಾಂಬ ನಗರದ ರವಿಕುಮಾರ್ ಎಂಬವರ ಮಗ ಪ್ರಥ್ವಿನ್(27) ಎಂಬವರು ನ.5ರಂದು ಕೆಲಸಕ್ಕೆ ಬಂದರಿಗೆ ಹೋದವರು ಈವರೆಗೆ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.