ಡಿ. 14: ಕಾಸರಗೋಡು ಜಿ.ಪಂ. ಚುನಾವಣೆ : ಎಲ್ ಡಿ ಎಫ್ ಅಭ್ಯರ್ಥಿಗಳ ಪಟ್ಟಿ ಅಂತಿಮ
ಕಾಸರಗೋಡು : ಕಾಸರಗೋಡು ಜಿಲ್ಲಾ ಪಂಚಾಯತ್ ಡಿ. 14ರಂದು ನಡೆಯಲಿರುವ ಚುನಾವಣೆಯಲ್ಲಿ ಎಲ್ ಡಿ ಎಫ್ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿದೆ.
17 ಸ್ಥಾನಗಳ ಪೈಕಿ ಸಿಪಿಐಎಂ ಹತ್ತು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಸಿಪಿಐ 3, ಕೇರಳ ಕಾಂಗ್ರೆಸ್ ಎಂ, ಎಲ್ ಜೆ ಡಿ, ಐ ಎನ್ ಎಲ್ ಗೆ ತಲಾ ಒಂದು ಸ್ಥಾನ ನೀಡಲಾಗಿದೆ. ಹೊಸ ಮುಖಗಳಿಗೆ ಈ ಬಾರಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ಚಿತ್ತಾರಿಕಾಲ್ ವಾರ್ಡ್ ನಲ್ಲಿ ಡಿಡಿಎಫ್ ಪಕ್ಷ ದ ಅಭ್ಯರ್ಥಿಗೆ ಸಿಪಿಎಂ ಬೆಂಬಲ ನೀಡಲಿದೆ.
ಚೆರ್ವತ್ತೂರು ಸಿ. ಜಿ ಸಜಿತ್ , ಮಡಿಕೈ ಬೇಬಿ ಬಾಲಕೃಷ್ಣನ್ , ಪೆರಿಯ ಫಾತಿಮತ್ , ಶಂನಾ , ದೇಲಂಪಾಡಿ ಎ . ಪಿ ಕುಶಲ , ಕರಿಂದಲ ಕೆ. ಶಕುಂತಲಾ, ಕುಂಬಳೆ ಕೆ . ಶಾಲಿನಿ , ಮಂಜೇಶ್ವರ ಅಬೂಬಕ್ಕರ್ ಸಾದಿಕ್ , ಪುತ್ತಿಗೆ ಬಿ . ವಿಜಯಕುಮಾರ್ , ಬೇಡಡ್ಕ ಎಸ್ .ಎನ್ ಸರಿತ್, ವರ್ಕಾಡಿ ಪುಷ್ಪಾ ಜಯರಾಂ , ಎಡನೀರು ಸಿ . ಜಾನು , ಉದುಮ ಜಮೀಲಾ ಟೀಚರ್ , ಕಳ್ಳಾರ್ ಸಿನೋಜ್ , ಚಿತ್ತಾರಿಕಾಲ್ ಪಿ . ವೇಣುಗೋಪಾಲ್ , ಪಿಲಿಕ್ಕೋಡ್ ಎಂ . ಮಧು ಕಣಕ್ಕಿಲಿಯಲಿರುವರು. ಚೆಂಗಳ ಮತ್ತು ಸ್ಟೇಷನ್ ವಾರ್ಡ್ ಗೆ ಅಭ್ಯರ್ಥಿಗಳನ್ನು ಅಂತಿಮ ಗೊಳಿಸಿಲ್ಲ .