ಕೋಟ: ಬೆಂಕಿ ತಗುಲಿ ಮಹಿಳೆ ಮೃತ್ಯು
ಕೋಟ, ನ.22: ಕಸಕ್ಕೆ ಹಾಕಿದ್ದ ಬೆಂಕಿ ತಗುಲಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ನ.21ರಂದು ಕೋಟ ಮಣೂರು ಎಂಬಲ್ಲಿ ನಡೆದಿದೆ.
ಮೃತರನ್ನು ಮಣೂರು ಜಟ್ಟಿಗೇಶ್ವರ ದೇವಸ್ಥಾನ ಸಮೀಪದ ನಿವಾಸಿ ಬಾಗಿ (68) ಎಂದು ಗುರುತಿಸಲಾಗಿದೆ. ಇವರು ಮಧ್ಯಾಹ್ನ ವೇಳೆ ಮನೆ ಸಮೀಪ ಕಸಗಳನ್ನು ರಾಶಿ ಹಾಕಿ ಬೆಂಕಿ ಹಾಕುತ್ತಿದ್ದಾಗ ಸೀರೆಗೆ ಬೆಂಕಿ ತಗುಲಿತ್ತೆನ್ನಲಾಗಿದೆ. ಈ ವೇಳೆ ಅವರು ತಲೆ ಸುತ್ತು ಬಂದು ಬೆಂಕಿಯ ರಾಶಿಗೆ ಬಿದ್ದರೆಂದು ತಿಳಿದು ಬಂದಿದೆ.
ಇದರ ಪರಿಣಾಮ ಗಂಭೀರವಾಗಿ ಸುಟ್ಟ ಗಾಯಗೊಂಡ ಅವರನ್ನು ಕೂಡಲೇ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story