ಗೀತಾಂಜಲಿ ಸಿಲ್ಕ್ಸ್: ನ.30ರವರೆಗೆ ರಿಯಾಯಿತಿ ದರ ವಿಸ್ತರಣೆ
ಉಡುಪಿ, ನ.25: ಕರಾವಳಿಯ ಅತಿದೊಡ್ಡ ಬಟ್ಟೆ ಮಳಿಗೆಯಾದ ಉಡುಪಿಯ ಗೀತಾಂಜಲಿ ಸಿಲ್ಕ್ಸ್ನಲ್ಲಿ ಶೇ.20 ರಿಯಾಯಿತಿಯನ್ನು ಗ್ರಾಹಕರ ಅಪೇಕ್ಷೆ ಮೇರೆಗೆ ನ.30ರವರೆಗೆ ಮುಂದುವರಿಸಲಾಗಿದೆ.
ಗೀತಾಂಜಲಿ ಸಿಲ್ಕ್ಸ್ ಈ ವರ್ಷ ‘ಹಬ್ಬ ಆಚರಿಸಿ ಗೀತಾಂಜಲಿಯೊಂದಿಗೆ’ ಎಂಬ ಪರಿಕಲ್ಪನೆಯೊಂದಿಗೆ ಗ್ರಾಹಕರಿಗೆ ರಿಯಾಯಿತಿ ದರದೊಂದಿಗೆ ಉತ್ತಮ ಗುಣಮಟ್ಟದ ಉಡುಪುಗಳನ್ನು ದೊರಕಿಸುವುದರಲ್ಲಿ ಯಶಸ್ವಿಯಾಗಿದೆ ಮತ್ತು ಗ್ರಾಹಕರಿಂ ಉತತಿಮ ಸ್ಪಂದನೆ ವ್ಯಕ್ತವಾಗಿದೆ.
ಪುರುಷರಿಗೆ ಮದುವೆ ಸಮಾರಂಭಗಳಿಗೆ ಬೇಕಾದ ಸೂಟ್, ಶೇರ್ವಾನಿ, ಇಂಡೋವೆಸ್ಟರ್ನ್, ಜೋದ್ಪುರಿ, ಕುರ್ತಾ ಪೈಜಾಮ, ಫಾರ್ಮಲ್ಸ್, ಕ್ಯಾಶುವಲ್ಸ್ ಶರ್ಟ್ಸ್ ಬ್ರಾಂಡೆಡ್ ಉಡುಪುಗಳು, ಪ್ಯಾಂಟ್ಸ್, ಜೀನ್ಸ್, ಟಿ ಶರ್ಟ್, ಬರ್ಮುಡ, ಒಳ ಉಡುಪು, ಬೆಲ್ಟ್, ವಾಲೆಟ್ಸ್, ಪರ್ಫ್ಯೂಮ್ಸ್ಗಳು ಮೆನ್ಸ್ ಗ್ಯಾಲರಿಯಲ್ಲಿ ದೊರೆಯುತ್ತದೆ.
ಸೀರೆಗಳ ಬೃಹತ್ ಸಂಗ್ರಹ ಮಹಿಳೆಯರ ಸೀರೆ ಸೆಕ್ಷನ್ನಲ್ಲಿ ಸಾಂಪ್ರದಾಯಿಕ ವಿನ್ಯಾಸಗಳ ಸೀರೆಗಳು, ಕಾಂಚಿಪುರಂನ ನೂತನ ವಿನ್ಯಾಸಗಳು, ಧರ್ಮಾವರಂ, ಪೋಚಂಪಳ್ಳಿ, ಪಟೋಲ ಸೀರೆ, ಇಕ್ಕಟ್ಪಿಂಟ್ ಸೀರೆ, ಟ್ರೆಸ್ಸೂರ್ ಸಿಲ್ಕ್ಸ್, ಲಿನೆನ್ ಸೀರೆ, ಕಾಟನ್ ಸೀರೆ, ಬೆಳಗಾಂ ಕಾಟನ್, ಚಿಫಾನ್, ಜಾರ್ಜೆಟ್, ನೆಟ್ಟೆಡ್, ಡಿಜಿಟಲ್ ಪ್ರಿಂಟ್ ಫ್ಯಾನ್ಸಿ ಸೀರೆಗಳು, ಸಿಂಥೆಟಿಕ್ ಸೀರೆಗಳ ಸಂಗ್ರಹ ಸಖೀ ಸೀರೆ ಸೆಕ್ಷನ್ನಲ್ಲಿ ದೊರೆಯುತ್ತದೆ.
ಮಹಿಳೆಯರ ಲೈಫ್ಸ್ಟೈಲ್ ಸೆಕ್ಷನ್ನಲ್ಲಿ ಚೂಡಿದಾರ್, ಗೌನ್, ಕ್ರಾಪ್ ಟಾಪ್, ಪ್ಲಾಜೋ ಸೆಟ್, ಸೈಡ್ಸ್ಲಿಟ್ ಚೂಡಿದಾರ್, ಪಟಿಯಾಲ ಸೆಟ್, ವೆಸ್ಟರ್ನ್ ಟಾಪ್ಸ್, ಕುರ್ತಿಸ್, ವೆಸ್ಟರ್ನ್ ಗೌನ್, ಜೀನ್ಸ್, ಜೆಗಿಂಗ್ಸ್, ಲೆಗ್ಗಿನ್ಸ್, ಡಿಸೈನರ್ ದುಪ್ಪಟ್ಟ, ನೈಟಿ, ನೈಟ್ವೇರ್, ಡ್ರೆಸ್ ಮೆಟೀರಿಯಲ್ಸ್, ಮ್ಯಾಚಿಂಗ್ ಮೆಟೀರಿಯಲ್ಸ್ ಮತ್ತು ಬ್ರೈಡಲ್ ಬಾಟೆಕ್ನಲ್ಲಿ ಎಲ್ಲ ಸಮುದಾಯದವರ ಸಾಂಪ್ರದಾಯಿಕ ಉಡುಪುಗಳು ಎಕ್ಸ್ಕ್ಲೂಸಿವ್ ಸೆಕ್ಷನ್ನಲ್ಲಿ ವಿಶಾಲ ಟ್ರಯಲ್ ರೂಮ್ ಸೌಲಭ್ಯದೊಂದಿಗೆ ಸಿಗಲಿದೆ. ಪ್ರತ್ಯೇಕವಾದ ಗಾಗ್ರಾ, ಗೌನ್, ಕ್ರಾಪ್ಟಾಪ್, ವೈಟ್ಗೌನ್ ಮತ್ತು ಇನ್ನಿತರ ಉಡುಪುಗಳು ದೊರೆಯುತ್ತದೆ.
ಮಕ್ಕಳ ಸೆಕ್ಷನ್ ಕಿಡ್ಸ್ ಜೋನ್ನಲ್ಲಿ ದೈನಂದಿನ ಉಡುಪುಗಳು, ಎಲ್ಲ ಸಮಾರಂಭಗಳಿಗೆ ಬೇಕಾದ ಸಾಂಪ್ರದಾಯಿಕ, ನೂತನ ಶೈಲಿಯ ಉಡುಪುಗಳು ದೊರೆಯುತ್ತವೆ. ಮಳಿಗೆಗೆ ಉಡುಪುಗಳನ್ನು ಸರಬರಾಜು ಮಾಡುವ ಎಲ್ಲ ತಯಾರಕರನ್ನು ಒಂದುಗೂಡಿಸಿ ನೂತನ ಮತ್ತು ಸಾಂಪ್ರದಾಯಿಕ ಉಡುಪು ಗಳನ್ನು ಅತಿ ಕಡಿಮೆ ಮತ್ತು ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ಒದಗಿಸುವುದ ರಲ್ಲಿ ಯಶಸ್ವಿ ಆಗಿದ್ದೇವೆ ಎಂದು ಗೀತಾಂಜಲಿ ಸಿಲ್ಕ್ಸ್ ಆಡಳಿತ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.