ದ.ಕ.: 57 ಮಂದಿಗೆ ಕೊರೋನ ಸೋಂಕು
ಮಂಗಳೂರು, ನ. 26: ದ.ಕ. ಜಿಲ್ಲೆಯಲ್ಲಿ ಹೊಸದಾಗಿ 57 ಮಂದಿಗೆ ಸೋಂಕು ತಗುಲಿದೆ. ಗುರುವಾರ 47 ಮಂದಿ ಗುಣಮುಖರಾಗಿದ್ದಾರೆ. ಕೋವಿಡ್ನಿಂದ ಮೃತಪಟ್ಟ ಯಾವುದೇ ಪ್ರಕರಣ ವರದಿಯಾಗಿಲ್ಲ.
ಜಿಲ್ಲೆಯಲ್ಲಿನ 31,721 ಸೋಂಕಿತರ ಪೈಕಿ 30,463 ಮಂದಿ ಕೊರೋನಮುಕ್ತರಾಗಿದ್ದಾರೆ. ಇಲ್ಲಿಯವರೆಗೆ ಕೋವಿಡ್ಗೆ 709 ಮಂದಿ ಮೃತಪಟ್ಟಿ ದ್ದಾರೆ. ಜಿಲ್ಲೆಯಲ್ಲಿ 549 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲಿ 14,353 ಮಾಸ್ಕ್ ಉಲ್ಲಂಘನೆ ಪ್ರಕರಣಗಳು ಪತ್ತೆಯಾಗಿದ್ದು, 15,47,302 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಯ ಪ್ರಕಟನೆ ತಿಳಿಸಿದೆ.
Next Story